alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಸಿಹಿ ಸುದ್ದಿ

ಭೋಪಾಲ್: ಗುಜರಾತ್ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊಸ್ತಿಲಿನಲ್ಲೇ ಕಾಂಗ್ರೆಸ್ ಗೆ ಸಿಹಿ ಸುದ್ದಿ ಸಿಕ್ಕಿದೆ.

ಮಧ್ಯಪ್ರದೇಶದ ಚಿತ್ರಕೂಟ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಬಿ.ಜೆ.ಪಿ.ಗೆ ತೀವ್ರ ಹಿನ್ನಡೆಯಾಗಿದೆ.

ಬಿಜೆ.ಪಿ. ಅಭ್ಯರ್ಥಿ ಶಂಕರ್ ದಯಾಳ್ ತ್ರಿಪಾಠಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ನೀಲಾಂಶು ಚತುರ್ವೇದಿ 14,433 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಗುರುವಾರ ಉಪ ಚುನಾವಣೆಗೆ ಮತದಾನ ನಡೆದಿದ್ದು, ಇಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್ ಶಾಸಕ ಪ್ರೇಮ್ ಸಿಂಗ್ 2017 ರ ಮೇ ನಲ್ಲಿ ನಿಧನರಾಗಿದ್ದರು. ಅವರು 1998, 2003 ಮತ್ತು 2013 ರಲ್ಲಿ ಚುನಾಯಿತರಾಗಿದ್ದರು. 2008 ರಲ್ಲಿ ಬಿ.ಜೆ.ಪಿ. ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದರು.

ಚಿತ್ರಕೂಟ ಉಪ ಚುನಾವಣೆ ಜಿದ್ದಾಜಿದ್ದಿನ ಕಣವಾಗಿತ್ತು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಮಧ್ಯಪ್ರದೇಶ ಬಿ.ಜೆ.ಪಿ. ಮುಖ್ಯಸ್ಥ ನಂದಕುಮಾರ್ ಚೌಹಾಣ್ ಇಲ್ಲಿ ಪ್ರಚಾರ ನಡೆಸಿದ್ದರೂ, ಗೆಲುವು ತಂದು ಕೊಡಲಾಗಿಲ್ಲ.

ಕಾಂಗ್ರೆಸ್ 66,810 ಮತಗಳನ್ನು ಪಡೆದರೆ, ಬಿ.ಜೆ.ಪಿ. ಅಭ್ಯರ್ಥಿ 52,677 ಮತಗಳನ್ನು ಪಡೆದಿದ್ದಾರೆ. ಗುಜರಾತ್ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಲ್ಲದಿದ್ದರೂ, ಕಾಂಗ್ರೆಸ್ ನಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...