alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್: ಚೀನಾ ಪ್ರಜೆ ಬಳಿ ಇತ್ತು ಆಧಾರ್ ಕಾರ್ಡ್…!

ಪಶ್ಚಿಮ ಬಂಗಾಳದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಚೀನಾ ಪ್ರಜೆಯೊಬ್ಬ ತನ್ನ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿರುವುದು ಪತ್ತೆಯಾಗಿದೆಯಲ್ಲದೇ ಈತ ಕೆಲ ನಕಲಿ ದಾಖಲೆಗಳನ್ನು ಹೊಂದಿದ್ದನೆನ್ನಲಾಗಿದೆ.

ಉತ್ತರ ಬಂಗಾಳದ ಜಲಪೈಗುರಿ ನಗರಕ್ಕೆ ಬಂದಿದ್ದ ಚೀನಾ ಪ್ರಜೆ ಯಾ ವಾಂಗ್, ಹೋಟೆಲ್ ನಲ್ಲಿ ರೂಮ್ ಮಾಡುವ ವೇಳೆ ತನ್ನ ಗುರುತಿನ ಪತ್ರವಾಗಿ ಈ ಆಧಾರ್ ಕಾರ್ಡ್ ನೀಡಿದ್ದನೆನ್ನಲಾಗಿದೆ. ಈತನೊಂದಿಗೆ ನೇಪಾಳದ ಗಣೇಶ್ ಭಟ್ಟಾರಾಯ್ ಹಾಗೂ ಸ್ಥಳೀಯ ಉದ್ಯಮಿ ಬಿಪುಲ್ ಅಗರ್ವಾಲ್ ಇದ್ದರೆನ್ನಲಾಗಿದ್ದು, ಇದೀಗ ಮೂವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಣೇಶ್ ಭಟ್ಟರಾಯ್ ಹಾಗೂ ಬಿಪುಲ್ ಅಗರ್ವಾಲ್ ರನ್ನ ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಯಾ ವಾಂಗ್ ಅನಾರೋಗ್ಯಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೀನಾ ಪ್ರಜೆ ಯಾ ವಾಂಗ್ ಅಧಿಕೃತ ಪಾಸ್ಪೋರ್ಟ್ ಹೊಂದಿದ್ದರೂ ಯಾವ ಕಾರಣಕ್ಕೆ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾನೆನ್ನುವ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...