alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಜ್ರಿವಾಲ್ ಮೇಲೆ ಸಚಿವಾಲಯದಲ್ಲೇ ಮೆಣಸಿನ ಪುಡಿ ಎರಚಿದ ವ್ಯಕ್ತಿ ಅರೆಸ್ಟ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಸಚಿವಾಲಯದಲ್ಲೇ ವ್ಯಕ್ತಿಯೊಬ್ಬ ಮೆಣಸಿನ ಪುಡಿ ಎರಚಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಅರವಿಂದ್ ಕೇಜ್ರಿವಾಲ್ ಊಟಕ್ಕೆ ತೆರಳಲು ಮೂರನೇ ಮಹಡಿಯಲ್ಲಿದ್ದ ತಮ್ಮ ಕಚೇರಿಯಿಂದ ಹೊರ ಬಂದ ವೇಳೆ, ಅನಿಲ್ ಕುಮಾರ್ ಎಂಬಾತ ಮೆಣಸಿನ ಪುಡಿ ಎರಚಿದ್ದಾನೆ.

ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಕೂಡಲೇ ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಅತ್ಯಂತ ಬಿಗಿ ಭದ್ರತೆ ಹೊಂದಿರುವ ಸಚಿವಾಲಯಕ್ಕೆ ತಪಾಸಣೆ ಇಲ್ಲದೆ ಆ ವ್ಯಕ್ತಿ ಪ್ರವೇಶಿಸಿದ್ದಾದರೂ ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...