alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಮಾಡಲಾಗುತ್ತೆ ಮೆಣಸಿನ ಅಭಿಷೇಕ…!

temple

ಅಭಿಷೇಕ ಎಂದಾಕ್ಷಣ ಮೊದಲು ನೆನಪಾಗುವುದು ಹಾಲು, ತುಪ್ಪ, ಸಕ್ಕರೆ, ಮೊಸರು, ಜೇನುತುಪ್ಪ ಮುಂತಾದವು. ಆದರೆ ಮನುಷ್ಯರನ್ನು ದೇವರಂತೆ ಕೂರಿಸಿ ಅವರಿಗೆ ಮೆಣಸಿನ ಅಭಿಷೇಕ ಮಾಡುವುದನ್ನು ಎಲ್ಲಾದರೂ ನೋಡಿದ್ದೀರಾ?

ಇಂತಹ ವಿಚಿತ್ರ ಅಭಿಷೇಕ ನಡೆಯುವುದು ತಮಿಳುನಾಡಿನ ಇದ್ಯಾಂಚವಾಡಿಯ ವರ್ಣಮುತ್ತು ಮಾರಿಯಮ್ಮನ ದೇವಸ್ಥಾನದಲ್ಲಿ. ಇದು ತಮಿಳುನಾಡಿನ ಅತಿ ದೊಡ್ಡ ಜಿಲ್ಲೆ ಎನಿಸಿಕೊಂಡಿರುವ ವೆಲುಪ್ಪುರಂ ನಲ್ಲಿದೆ.

ಈ ಮಾರಿಯಮ್ಮನ ದೇವಸ್ಥಾನದಲ್ಲಿ ಪ್ರತೀ ವರ್ಷ ಜೂನ್ ತಿಂಗಳ ಸಮಯದಲ್ಲಿ 8 ದಿನಗಳ ಕಾಲ ಈ ಅಭಿಷೇಕ ನಡೆಯುತ್ತದೆ. ಈ ಅಭಿಷೇಕವನ್ನು ಜನರ ಒಳ್ಳೆಯ ಆರೋಗ್ಯಕ್ಕಾಗಿ ಮಾಡುತ್ತಾರಂತೆ. ಅಲ್ಲಿನ ದೇವಸ್ಥಾನದಲ್ಲಿ ಇದು ದೊಡ್ಡ ಹಬ್ಬದಂತೆಯೇ ನಡೆಯುತ್ತದೆ.

ಅಭಿಷೇಕದಲ್ಲಿ ಪಾಲ್ಗೊಳ್ಳುವವರು ಕಂಕಣ ತೊಟ್ಟು ವ್ರತಾದಿಗಳನ್ನು ಕೈಗೊಳ್ಳುತ್ತಾರೆ. ನಂತರದಲ್ಲಿ ಅವರ ಕೇಶಮುಂಡನ ಕಾರ್ಯಕ್ರಮ ನಡೆಯುತ್ತದೆ. ಕೇಶಮುಂಡನವಾದ ನಂತರ ದೇವತೆಗಳಂತೆಯೇ ಅವರನ್ನು ಕೂರಿಸಿ ಅವರಿಗೆ ಪೂಜೆ ಮಾಡಲಾಗುತ್ತದೆ. ನಂತರದಲ್ಲಿ 108 ಬಗೆಯ ಸಾಮಗ್ರಿಗಳಿಂದ ಅಭಿಷೇಕ ಮಾಡುತ್ತಾರೆ. ತೈಲ, ವಿಭೂತಿ, ಹೂವು, ಕುಂಕುಮ, ಹಳದಿ ಮುಂತಾದವುಗಳ ಲೇಪನವಾದ ಮೇಲೆ ಮೆಣಸಿನ ಪುಡಿಯ ಲೇಪನ ನಡೆಯುತ್ತದೆ.

ಈ ಪರಂಪರೆ ಕಳೆದ 85 ವರ್ಷದಿಂದಲೂ ನಡೆದುಕೊಂಡು ಬಂದಿದೆ. 1930ರಲ್ಲಿ ಈ ಹಳ್ಳಿಯ ಶ್ರೀನಿವಾಸನ್ ಎಂಬ ವ್ಯಕ್ತಿ ನಿಂಬು ಮರದಿಂದ ಹೊರಬರುತ್ತಿರುವ ಅಂಟನ್ನು ತಿಂದನಂತೆ. ಹಾಗೆ ಅವನು ತಿಂದ ನಂತರ ಭಗವಂತ ಪ್ರತ್ಯಕ್ಷವಾಗಿ ಅವನಿಗೆ ಅಲ್ಲಿ ಗುಡಿ ಕಟ್ಟುವಂತೆ ಹಾಗೂ ಜನರ ಒಳಿತಿಗಾಗಿ ಮೆಣಸಿನ ಅಭಿಷೇಕ ಮಾಡಲು ಹೇಳಿದನಂತೆ. ಭಗವಂತನ ಆಣತಿಯಂತೆ ಶ್ರೀನಿವಾಸನ್ ಮಂದಿರ ನಿರ್ಮಿಸಿ ಅಭಿಷೇಕ ಕೈಗೊಂಡ. ಅದೇ ಪರಂಪರೆ ಇಂದಿಗೂ ಚಾಲ್ತಿಯಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...