alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಶಾನದಲ್ಲಿ ಹೂತು ಹಾಕಿದ್ರೂ ಬದುಕಿ ಬಂತು ಮಗು

newborn-baby-hands-800x533

ಮಧ್ಯಪ್ರದೇಶದ ಘುಸ್ ಎಂಬ ಗ್ರಾಮದ ಸ್ಮಶಾನದಲ್ಲಿ ಮಗುವನ್ನು ಸಜೀವವಾಗಿ ಹೂತು ಹಾಕಲಾಗಿತ್ತು. ಶೇರ್ ಸಿಂಗ್ ಎಂಬುವವರು ಆ ನವಜಾತ ಶಿಶುವನ್ನು ರಕ್ಷಣೆ ಮಾಡಿದ್ದಾರೆ. ಸ್ಮಶಾನದ ಸಮೀಪದಲ್ಲೇ ಕೆಲವು ಮಕ್ಕಳು ಆಟವಾಡುತ್ತಿದ್ರು. ಅವರಿಗೆ ಮಗು ಅಳುವ ಸದ್ದು ಕೇಳಿದೆ.

ಕೂಡಲೇ ಶೇರ್ ಸಿಂಗ್ ಪತ್ನಿಗೆ ಮಕ್ಕಳು ವಿಷಯ ತಿಳಿಸಿದ್ರು. ಮಣ್ಣಿನ ಅಡಿಯಿಂದ ಮಗುವಿನ ಅಳು ನಿಧಾನವಾಗಿ ಕೇಳುತ್ತಿತ್ತು, ಸುನೀತಾ ಹಾಗೂ ಶೇರ್ ಸಿಂಗ್ ಕೈಗಳಿಂದ್ಲೇ ಮಣ್ಣನ್ನು ಸರಿಸಿದ್ದಾರೆ. ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿದ್ದಾರೆ.

ನೆಲದಿಂದ ಒಂದು ಅಡಿ ಆಳದಲ್ಲಿ ಜೀವಂತ ಗಂಡು ಮಗುವನ್ನು ಹೂತು ಹಾಕಲಾಗಿತ್ತು. ನಂತರ ಶೇರ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ರು. ಶಿಶುವನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಹೆತ್ತವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಮಗುವಿಗೆ ಅಲ್ಲಲ್ಲಿ ಕೀಟಗಳು ಕಚ್ಚಿವೆ. ನೆಗಡಿ ಮತ್ತು ಜ್ವರ ಕೂಡ ಬಂದಿತ್ತು. ಆದ್ರೆ ಯಾವುದೇ ಪ್ರಾಣಾಪಾಯವಿಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. ಮಗು ಜನಿಸಿ 10 ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

ಮಗುವನ್ನು ರಕ್ಷಿಸಿದ ದಂಪತಿ ಅದನ್ನು ದತ್ತು ಪಡೆಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಮೂವರು ಹೆಣ್ಣುಮಕ್ಕಳಿದ್ದು, ಈ ಗಂಡು ಮಗುವನ್ನು ದೇವರೇ ಕಳಿಸಿದ್ದಾನೆ ಅಂತಾ ನಂಬಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...