alex Certify
ಕನ್ನಡ ದುನಿಯಾ       Mobile App
       

Kannada Duniya

ತರೂರ್ ಬರೆದ ಶಬ್ದ ಹೇಳುವುದಕ್ಕೆ ಸುಸ್ತಾದ ಮಕ್ಕಳು…!

ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ತಮ್ಮ ನೂತನ ಪುಸ್ತಕ “ದಿ ಪ್ಯಾರಡಾಕ್ಸಿಯಲ್ ಪ್ರೈಂ ಮಿನಿಸ್ಟರ್” ಪುಸ್ತಕದ ಬಗ್ಗೆ ಟ್ವೀಟ್ ಮಾಡುವಾಗ ಬಳಸಿದ ಫ್ಲೋಸಿನೋಸಿನಿಹಿಲಿಫಿಲಿಫಿಕೇಷನ್ (floccinaucinihilipilification) ಶಬ್ದಕ್ಕೆ ನೆಟ್ಟಿಗರು ಸುಸ್ತಾಗಿದ್ದು ಹಳೆ ವಿಷಯ. ಇದೀಗ ಮಕ್ಕಳು ಈ ಶಬ್ದವನ್ನು ಹೇಳಲು ಪಡುತ್ತಿರುವ ಪಾಡು ವೈರಲ್ ಆಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದಿರುವ ಪುಸ್ತಕದ ಬಗ್ಗೆ ಫ್ಲೋಸಿನೋಸಿನಿಹಿಲಿಫಿಲಿಫಿಕೇಷನ್ ಶಬ್ದ ಬಳಕೆ ಮಾಡಿದ್ದ ತರೂರ್, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದರು. ಬಹುತೇಕರು ಈ ಶಬ್ದವನ್ನು ಒಂದೇ ಉಸಿರಿನಲ್ಲಿ ಹೇಳಿದರೆ ಉಸಿರುಗಟ್ಟುತ್ತದೆ ಎಂದರೆ, ಇನ್ನು ಕೆಲವರು, ಪುಸ್ತಕ ಓದುವಾಗ ಪಕ್ಕದಲ್ಲಿ ಆಕ್ಸ್‌ಫರ್ಡ್ ಶಬ್ದಕೋಶ ಇರಬೇಕು ಎಂದಿದ್ದರು. ಆದರೆ ಇದೀಗ ಹಲವರು ಚಿಕ್ಕ ಮಕ್ಕಳಿಗೆ ಈ ಶಬ್ದವನ್ನು ಉಚ್ಚರಿಸುವಂತೆ ಹೇಳಿ, ಮಾಡಿರುವ ವಿಡಿಯೋಗಳು ವೈರಲ್ ಆಗುತ್ತಿದೆ.

ಬಹುತೇಕ ಮಕ್ಕಳು ಈ ಶಬ್ದವನ್ನು ಹೇಳುವುದಕ್ಕೆ ಒದ್ದಾಡಿದರೆ, ಇನ್ನು ಕೆಲವರು ಅವರಿಗೆ ಅನಿಸಿದ್ದನ್ನು ಹೇಳಿ ಮುಗಿಸಿದ್ದಾರೆ. ಎರಡು ವರ್ಷದ ಪೋರಿ ಫ್ಲೋಸಿನೋಸಿನಿಹಿಲಿಫಿಲಿಫಿಕೇಷನ್ ಎಂದು ಹೇಳಿರುವ ವಿಡಿಯೊ ಭಾರಿ ವೈರಲ್ ಆಗಿದ್ದು, ಅನೇಕರು ತಮ್ಮ ಮಕ್ಕಳು ಹೇಳಿರುವ ವಿಡಿಯೊವನ್ನು ತರೂರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಈ ಶಬ್ದದ ಉಚ್ಚರಣೆ ಬಗ್ಗೆ ಪ್ರತಿಕ್ರಿಯಿಸಿರುವ ತರೂರ್, ನಾನು ಎರಡು ವರ್ಷದವನಿದ್ದಾಗ ಈ ರೀತಿಯ ಶಬ್ದವನ್ನು ಹೇಳಲು ಆಗುತ್ತಿರಲಿಲ್ಲ ಎಂದಿದ್ದಾರೆ. ಆದರೆ ಟ್ವಿಟಿಗರೊಬ್ಬರು ಹೃದಯ ಪರೀಕ್ಷೆ ವೇಳೆ, ಇಸಿಜಿ, ಥ್ರೆಡ್ ಮಿಲ್ ಹಾಗೂ ಫ್ಲೋಸಿನೋಸಿನಿಹಿಲಿಫಿಲಿಫಿಕೇಷನ್ ಶಬ್ದವನ್ನು ಒಂದೇ ಉಸಿರಲ್ಲಿ ಹೇಳಿದವರು ಸರಿಯಾಗಿದ್ದಾರೆ ಎನ್ನಬಹುದು ಎಂದು ಕಾಲೆಳೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...