alex Certify
ಕನ್ನಡ ದುನಿಯಾ       Mobile App
       

Kannada Duniya

OMG ! 18 ತಿಂಗಳ ಮಗುವಿನ ತೂಕ 22 ಕೆ.ಜಿ.

heaviest_baby_pune

ಮಹಾರಾಷ್ಟ್ರದ ಪುಣೆಯ ಮಗುವೊಂದು ಅಪರೂಪದ ರೋಗಕ್ಕೆ ತುತ್ತಾಗಿದೆ. ಈ ರೋಗದಿಂದಾಗಿ 18 ತಿಂಗಳಲ್ಲಿಯೇ ಮಗುವಿನ ತೂಕ 22 ಕೆ.ಜಿ. ಯಾಗಿದೆ. ಒಂದೇ ಸಮನೆ ಹೆಚ್ಚಾಗುತ್ತಿರುವ ಮಗನ ತೂಕ ಪಾಲಕರ ಚಿಂತೆಗೆ ಕಾರಣವಾಗಿದೆ.

ಮಗುವನ್ನು ಮುಂಬೈನ ಪ್ರತಿಷ್ಠಿತ ಆಸ್ಪತ್ರೆಗೆ ಕರೆ ತಂದಾಗ ವೈದ್ಯರೂ ಬಾಲಕನ ತೂಕ ನೋಡಿ ದಂಗಾಗಿದ್ದಾರೆ. ಭಾರತದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ರೋಗ ಕಾಣಿಸಿಕೊಂಡ ಮಕ್ಕಳಿಗೆ ಹೊಟ್ಟೆ ತುಂಬಿದೆಯಾ ಇಲ್ಲವಾ ಎಂಬುದೇ ತಿಳಿಯುವುದಿಲ್ಲ. ಇದರಿಂದಾಗಿ ತೂಕ ಜಾಸ್ತಿಯಾಗ್ತಾ ಹೋಗುತ್ತದೆ. ಭಾರತದಲ್ಲಿ ಈ ರೋಗಕ್ಕೆ ಇನ್ನೂ ಔಷಧಿ ಸಿಗುತ್ತಿಲ್ಲ. ಇಂಗ್ಲೆಂಡ್ ನಲ್ಲಿ ಮಾತ್ರ ಚಿಕಿತ್ಸೆ ದೊರೆಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಶ್ರೀಜಿತ್ ಹೆಸರಿನ 18 ತಿಂಗಳ ಬಾಲಕನಿಗೆ ರೋಗದಿಂದಾಗಿ ಕುಳಿತುಕೊಳ್ಳಲು ಸಾಧ್ಯವಾಗ್ತಿಲ್ಲ. ಮಲಗಲೂ ಸಾಧ್ಯವಾಗ್ತಿಲ್ಲ. ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತಿದೆ. ಶ್ರೀಜಿತ್  ತಾಯಿ ರೂಪಾಲಿ ಪ್ರಕಾರ, ಶ್ರೀಜಿತ್ ಗೆ ಆಗಾಗ ಆಹಾರ ನೀಡಬೇಕಂತೆ. ಹುಟ್ಟುವಾಗ ಶ್ರೀಜಿತ್ ತೂಕ 2.5 ಕೆ.ಜಿ. ಇತ್ತಂತೆ. ಆರು ತಿಂಗಳಲ್ಲಿ 4 ಕೆ.ಜಿ. ಇದ್ದ ಶ್ರೀಜಿತ್ 10ನೇ ತಿಂಗಳಲ್ಲಿ 17 ಕೆ.ಜಿ.ಯಾಗಿದ್ದಾನೆ. ಈಗ 22 ಕೆ.ಜಿ.ಯಾಗಿದ್ದು, ಸದ್ಯ ಬ್ರಿಟನ್ ನಿಂದ ಔಷಧಿ ತರಿಸಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...