alex Certify
ಕನ್ನಡ ದುನಿಯಾ       Mobile App
       

Kannada Duniya

15 ನೇ ವಯಸ್ಸಿಗೇ ತಾಯಿಯಾದ 11,000 ಬಾಲಕಿಯರು

51child-marriageಭುವನೇಶ್ವರ್: ಒಡಿಶಾದ ಸರ್ಕಾರಿ ದಾಖಲೆಯ ಪ್ರಕಾರವೇ ಆಘಾತಕಾರಿ ಮಾಹಿತಿ ಹೊರ ಬಿದ್ದಿದ್ದು, ಸುಮಾರು 11 ಸಾವಿರ ಬಾಲಕಿಯರು ಕೇವಲ 14 ರ ಹರೆಯದಲ್ಲೇ ವಿವಾಹವಾಗಿ 15 ನೇ ವರ್ಷಕ್ಕೆ ಮಕ್ಕಳ ತಾಯಿಯಾಗಿರುವುದು ಬೆಳಕಿಗೆ ಬಂದಿದೆ.

ಜನಗಣತಿಯಲ್ಲಿ ಈ ಮಾಹಿತಿ ಹೊರ ಬಿದ್ದಿದ್ದು, ಬಾಲ್ಯ ವಿವಾಹ ತಡೆಗಟ್ಟುವುದರಲ್ಲಿ ಒಡಿಶಾ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲೇ ವಿವಾಹವಾಗಿರುವ ಈ ಬಾಲಕಿಯರು ಸಂಸಾರದ ನೊಗವನ್ನು ಹೊತ್ತಿರುವುದು ವಿಪರ್ಯಾಸವೇ ಸರಿ.

ಜನಗಣತಿ ಪ್ರಕಾರ ಒಡಿಶಾದಲ್ಲಿ 15 ರ ವಯಸ್ಸಿನ 59.09 ಲಕ್ಷ ಬಾಲಕಿಯರಿದ್ದು, ಇವರುಗಳ ಪೈಕಿ 15,41,729 ಮಂದಿ ಈಗಾಗಲೇ ವಿವಾಹವಾಗಿದ್ದಾರೆ, ಹಾಗೂ 10,685 ಮಂದಿ ಮಗುವಿನ ತಾಯಿಯಾಗಿದ್ದಾರೆ. 3,896 ಬಾಲಕಿಯರು ಒಂದು ಮಗುವಿನ ತಾಯಿಯಾಗಿದ್ದರೆ 6,789 ಮಂದಿ ಎರಡು ಮಕ್ಕಳನ್ನು ಹೆತ್ತಿದ್ದಾರೆ. ಒಡಿಶಾದಲ್ಲಿ ಬಾಲ್ಯ ವಿವಾಹ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...