alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಧಿ ಮಾತ್ರೆ ಸೇವಿಸಿ ಕೋಮಾಕ್ಕೆ ಹೋದ್ಲು ಬಾಲಕಿ

ಬೇಧಿಯಿಂದ ಬಳಲುತ್ತಿದ್ದ ಬಾಲಕಿಯೊಬ್ಬಳು ವೈದ್ಯರ ಸಲಹೆ ಪಡೆಯದೆ ಮಾತ್ರೆ ಸೇವನೆ ಮಾಡಿ ಕೋಮಾಕ್ಕೆ ಹೋದ ಘಟನೆ ಬೆಳಕಿಗೆ ಬಂದಿದೆ. ದೆಹಲಿಯ 16 ವರ್ಷದ ಬಾಲಕಿ ಕೋಮಾಕ್ಕೆ ಹೋಗಿದ್ದಳು. ಚಿಕಿತ್ಸೆ ನಂತ್ರ ಆಕೆಗೆ ಪ್ರಜ್ಞೆ ಬಂದಿದೆ. ಆದ್ರೆ ಈ ಘಟನೆ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಕೆಲ ದಿನಗಳಿಂದ ಬಾಲಕಿಗೆ ಬೇಧಿ ಕಾಣಿಸಿಕೊಂಡಿತ್ತು. ಔಷಧಿ ಮಳಿಗೆಯಲ್ಲಿ ಮೆಟ್ರೋನಿಡಜೋಲ್ ಔಷಧಿ ತಂದು ತಿಂದಿದ್ದಾಳೆ. ಇದ್ರಿಂದ ಆಕೆ ಮೆದುಳಿನಲ್ಲಿ ಊತ ಕಾಣಿಸಿಕೊಂಡಿದೆ. ಇದು ಬಾಲಕಿ ಕೋಮಾಕ್ಕೆ ಹೋಗಲು ಕಾರಣವೆಂದು ವೈದ್ಯರು ಹೇಳಿದ್ದಾರೆ.

ಈ ಮಾತ್ರೆಯನ್ನು ಅನೇಕ ಔಷಧಿ ಕಂಪನಿಗಳು ಸಿದ್ಧಪಡಿಸುತ್ತವೆ. ಬಾಲಕಿ ಕಡಿಮೆ ಪ್ರಮಾಣದಲ್ಲಿ ಮಾತ್ರೆ ಸೇವನೆ ಮಾಡಿದ್ದರಿಂದ ಮಿದುಳಿಗೆ ಹೆಚ್ಚು ಹಾನಿಯಾಗಿಲ್ಲ. ಹಾಗಾಗಿ ಕೋಮಾದಿಂದ ಹೊರ ಬಂದಿದ್ದಾಳೆಂದು ವೈದ್ಯರು ಹೇಳಿದ್ದಾರೆ. ಹೆಚ್ಚಿನ ಮಾತ್ರೆಯಲ್ಲಿ ಔಷಧಿ ಸೇವನೆ ಮಾಡಿದ್ದರೆ ಜೀವ ಹೋಗುವ ಅಪಾಯವಿತ್ತು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...