alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣದ ಹೆಣ್ಣು ಶಿಶುವಿಗಿದೆ ಮೂರು ಕಾಲು

baby

ತೆಲಂಗಾಣದ ಆಸ್ಪತ್ರೆಯೊಂದರಲ್ಲಿ ಮೂರು ಕಾಲುಗಳುಳ್ಳ ಹೆಣ್ಣು ಮಗು ಜನಿಸಿದೆ. ಜನಗಾಂವ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಲತಾ ಎಂಬಾಕೆಗೆ ಹೆರಿಗೆಯಾಗಿದೆ. ಜನಿಸಿರುವ ಹೆಣ್ಣು ಮಗುವಿಗೆ ಸೊಂಟದ ಬಳಿಯಿಂದ ಮತ್ತೊಂದು ಹೆಚ್ಚುವರಿ ಕಾಲು ಇದೆ, ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಬಹುದು ಅಂತಾ ವೈದ್ಯರು ತಿಳಿಸಿದ್ದಾರೆ.

ಮೂರು ಕಾಲುಗಳಿವೆ ಅನ್ನೋದು ಬಿಟ್ರೆ ಮಗುವಿಗೆ ಇನ್ಯಾವುದೇ ರೀತಿಯ ದೈಹಿಕ ಊನವಿಲ್ಲ ಅಂತಾ ಡಾ. ಕೆ.ಶ್ರೀನಿವಾಸ್  ಸ್ಪಷ್ಟಪಡಿಸಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಕಾಂಚನಾಪಲ್ಲಿ ಗ್ರಾಮದ ಶ್ರೀಲತಾಳನ್ನು ಪತಿ ಸಾಂಬಯ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹೆರಿಗೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಾಯಿ- ಮಗುವನ್ನು ಹೈದ್ರಾಬಾದ್ ನ ನಿಲೋಫರ್ ಆಸ್ಪತ್ರೆಗೆ ರವಾನಿಸಲಾಗಿದೆ.

ಮೂರು ಕಾಲುಗಳುಳ್ಳ ಮಕ್ಕಳು ತುಂಬಾನೇ ಅಪರೂಪ. ಲಕ್ಷದಲ್ಲೊಂದು ಇಂತಹ ಮಗು ಜನಿಸುತ್ತದೆ ಅಂತಾ ವೈದ್ಯರು ತಿಳಿಸಿದ್ದಾರೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಅಂತಾ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...