alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರದಲ್ಲಿ ಜನಿಸಿದೆ ಥೇಟ್ ಏಲಿಯನ್ ನಂತಿರೋ ಮಗು

alien

ಬಿಹಾರದ ಕಾಟಿಹಾರ್ ನಲ್ಲಿ ವಿಚಿತ್ರ ರೂಪದ ಮಗುವೊಂದು ಜನಿಸಿದೆ. ದೊಡ್ಡ ಕಣ್ಣುಗಳು, ಚಿಕ್ಕ ತಲೆ, ದಪ್ಪನೆಯ ಆಕೃತಿಯ ಈ ಮಗು ಹರ್ಲೆಕ್ವಿನ್ ಅನ್ನೋ ಮತ್ಸ್ಯವ್ಯಾಧಿಯಿಂದ ಬಳಲ್ತಾ ಇದೆ. ಆದ್ರೆ ಮಗುವಿನ ವಿಚಿತ್ರ ರೂಪವನ್ನು ನೋಡಿ ಸ್ಥಳೀಯರು ಅದೊಂದು ಏಲಿಯನ್ ಅಂತಾ ಭಾವಿಸಿದ್ದಾರೆ. ಪವಾಡವೆಂದೇ ನಂಬಿದ್ದಾರೆ.

35 ವರ್ಷದ ಖಲೀದಾ ಬೇಗಂ ಎಂಬಾಕೆಗೆ ಸೋಮವಾರ ಹೆರಿಗೆಯಾಗಿದೆ. ಆದ್ರೆ ವಿಕಾರ ರೂಪದ ಮಗು ಜನಿಸಿದ್ದು ನೋಡಿ ಕುಟುಂಬದವರೆಲ್ಲ ಗಾಬರಿಯಾಗಿದ್ದಾರೆ. ಮೊದಮೊದಲು ಮಗುವಿಗೆ ಹಾಲುಣಿಸಲು ಸಹ ತಾಯಿ ನಿರಾಕರಿಸಿದ್ದಳು. ಮಗುವನ್ನು ತನ್ನ ಹತ್ತಿರಕ್ಕೂ ತರಬೇಡಿ ಅಂತಾ ಹೇಳಿದ್ದಳು. ಮಗುವಿನ ಬಗ್ಗೆ ಅಪಾರ ಆಸೆ ಇಟ್ಟುಕೊಂಡಿದ್ದ ಆಕೆಗೆ ವಿಕಲಾಂಗ ಶಿಶುವನ್ನು ನೋಡಿ ದುಃಖವಾಗಿತ್ತು.

ಗ್ರಾಮಸ್ಥರಿಗೆ ಮಾತ್ರ ಈ ಮಗುವೊಂದು ಅಚ್ಚರಿಯ ಸಂಗತಿಯಾಗಿಬಿಟ್ಟಿದೆ. ಮಗು ಹನುಮಂತನ ಪ್ರತಿರೂಪ ಅಂತಾ ಕೆಲವರ ವಾದ, ಇನ್ನು ಕೆಲವರು ಇದೊಂದು ಅನ್ಯಲೋಕದ ಜೀವಿ ಅಂತಾ ಮಾತನಾಡಿಕೊಳ್ತಿದ್ದಾರೆ. ಅಂಗವೈಕಲ್ಯದ ಬಗ್ಗೆ ಅರಿವಿಲ್ಲದ ಗ್ರಾಮಸ್ಥರು ಮಗುವೊಂದು ಏಲಿಯನ್ ಎಂಬ ಭ್ರಮೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...