alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ಅಪಹರಣದ ಸುದ್ದಿ ಕೇಳಿ ಹೃದಯಾಘಾತದಿಂದ ತಂದೆ ಸಾವು

child-abuse-1-e1469877410773

ಹೈದ್ರಾಬಾದ್ ನ ಮೈಲಾರದೇವಪಳ್ಳಿಯಲ್ಲಿ ಮಗ ಕಿಡ್ನಾಪ್ ಆಗಿರುವ ಸುದ್ದಿ ಕೇಳಿ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದಾನೆ.

ಶುಕ್ರವಾರ ಸಂಜೆ ಮನೆ ಮುಂದೆ ಆಟವಾಡುತ್ತಿದ್ದ 18 ತಿಂಗಳ ಮಗು ನಾಗ ಚೈತನ್ಯ ನಾಪತ್ತೆಯಾಗಿರೋದಾಗಿ ತಾಯಿ ಮಾಲತಿ ಪೊಲೀಸರಿಗೆ ದೂರು ನೀಡಿದ್ರು. ಸಿಸಿ ಟಿವಿಯಲ್ಲಿ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಹೋಗ್ತಾ ಇರೋದು ಸೆರೆಯಾಗಿತ್ತು. ಮಕ್ಕಳ ಮಾರಾಟದ ದಂಧೆ ನಡೆಸ್ತಾ ಇದ್ದ ಕವಿತಾ ಎಂಬಾಕೆ ಕರ್ನೂಲ್ ನ ರಾಮು ಎಂಬಾತನಿಗೆ 25,000 ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ಲು. 5000 ರೂಪಾಯಿ ಅಡ್ವಾನ್ಸ್ ಕೂಡ ಪಡೆದಿದ್ಲು.

ತನ್ನ ಸ್ವಂತ ಮಗನನ್ನು ಕೂಡ ಆಕೆ ಹಣಕ್ಕಾಗಿ ಮಾರಾಟ ಮಾಡಿದ್ದಾಳಂತೆ. ಸಿಕಂದರಾಬಾದ್ ನಲ್ಲಿದ್ದ ರಾಮುವನ್ನು ಹಿಡಿದ ಪೊಲೀಸರು ಮಗುವನ್ನು ರಕ್ಷಿಸಿ ಕರೆತಂದಿದ್ದಾರೆ. ಆದ್ರೆ ಮಗು ಸುರಕ್ಷಿತವಾಗಿ ಮನೆ ಸೇರುವಷ್ಟರಲ್ಲಿ ತಂದೆಯೇ ಬದುಕಿರಲಿಲ್ಲ. ಕಾರ್ಖಾನೆಯಲ್ಲಿ ಕೆಲಸ ಮಾಡ್ತಾ ಇದ್ದ ನರೇಂದರ್ ಗೆ ಮಗನ ಕಿಡ್ನಾಪ್ ಸುದ್ದಿ ಕೇಳಿ ಹೃದಯಾಘಾತವಾಗಿತ್ತು. ಶನಿವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದು, ಅಪಹರಣವಾಗಿದ್ದ ನಾಗಚೈತನ್ಯ ಕಿರಿಯ ಮಗ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...