alex Certify
ಕನ್ನಡ ದುನಿಯಾ       Mobile App
       

Kannada Duniya

ವಸುಂಧರಾ ರಾಜೆ ಬೆಂಬಲಿಗರಿಗಿಲ್ಲ ನೋಟು ನಿಷೇಧದ ನೋವು

vasundhara-raje

ನೋಟು ನಿಷೇಧವಾಗಿ 31 ದಿನ ಕಳೆದಿದೆ. ಆದ್ರೂ ದೇಶದ ಪರಿಸ್ಥಿತಿ ಬದಲಾಗಿಲ್ಲ. ಹಣವಿಲ್ಲದೆ ಜನರು ಪರದಾಡುತ್ತಿದ್ದಾರೆ. ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ಕ್ಯೂ ಇದೆ. ಈ ನೋಟು ನಿಷೇಧದ ಬಿಸಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಬೆಂಬಲಿಗರಿಗೆ ತಟ್ಟಿದಂತಿಲ್ಲ. ತಮ್ಮ ಸಿಎಂಗೆ ಒಂದು ಕ್ವಿಂಟಲ್ ಹೂವಿನ ಹಾರ ಹಾಕಿದ್ದಾರೆ ಬೆಂಬಲಿಗರು.

ಜಲಾವರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸುಂಧರಾ ರಾಜೆ ಪಾಲ್ಗೊಂಡಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಒಂದು ಟನ್ ತೂಕದ ಹೂವಿನ ಹಾರ ಹಾಕಿದ್ದಾರೆ. ನೋಟು ನಿಷೇಧ ಹಾಗೂ ಚಳಿಗಾಲದ ಹಿನ್ನೆಲೆಯಲ್ಲಿ ಹೂವಿನ ದರ ಗಗನಕ್ಕೇರಿದೆ. ಆದ್ರೆ ಇದ್ಯಾವುದೂ ವಸುಂಧರಾ ರಾಜೆ ಬೆಂಬಲಿಗರ ಮೇಲೆ ಪರಿಣಾಮ ಬೀರಿಲ್ಲ.

ಹಾಗಾಗಿ ದುಬಾರಿ ಬೆಲೆಯ ಹೂವಿನ ಹಾರವನ್ನು ಸಿಎಂ ಗೆ ಹಾಕಿದ್ದಾರೆ. ಸರಳತೆ ಬಗ್ಗೆ ಮಾತನಾಡುವ ವಸುಂಧರಾ ನಗ್ತಾ ನಗ್ತಾ ಹಾರ ಹಾಕಿಸಿಕೊಂಡು ತಾವೆಷ್ಟು ಸರಳರು ಎಂಬುದನ್ನು ತೋರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...