alex Certify
ಕನ್ನಡ ದುನಿಯಾ       Mobile App
       

Kannada Duniya

5 ತಿಂಗಳ ಬಳಿಕ ‘ಅಮ್ಮ’ನ ಕುರ್ಚಿಯಲ್ಲಿ ಕುಳಿತ ಸಿ.ಎಂ.

palani-cm-s

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಎಡಪ್ಪಾಡಿ ಪಳನಿಸ್ವಾಮಿ ವಿಧಾನಸಭೆಯಲ್ಲಿಯೂ ಬಹುಮತ ಸಾಬೀತುಪಡಿಸಿದ್ದಾರೆ.

ಸೋಮವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಬಳಸುತ್ತಿದ್ದ ಕುರ್ಚಿಯ ಮೇಲೆ ಕುಳಿತು ಪ್ರಮುಖ ನಿರ್ಧಾರ ಪ್ರಕಟಿಸಿದ್ದಾರೆ.

5 ತಿಂಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಈ ಕುರ್ಚಿಯ ಮೇಲೆ ಕುಳಿತು ಆಡಳಿತ ನಡೆಸುತ್ತಿದ್ದರು.

ಅವರ ಬಳಿಕ ಮುಖ್ಯಮಂತ್ರಿಯಾದ ಒ. ಪನ್ನೀರ್ ಸೆಲ್ವಂ ‘ಅಮ್ಮ’ನ ಕುರ್ಚಿಯ ಮೇಲೆ ಕುಳಿತಿರಲಿಲ್ಲ.

ಕ್ಯಾಬಿನೆಟ್ ಸಂಭೆಯಲ್ಲಿಯೂ ಜಯಾ ಅವರ ಫೋಟೋ ಇಟ್ಟುಕೊಂಡೇ ಆಡಳಿತ ನಡೆಸಿದ್ದರು.

ಈ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ ಜಯಲಲಿತಾ ಮುಖ್ಯಮಂತ್ರಿ ಹುದ್ದೆಯಿಂದ ಇಳಿದಾಗ, ಮುಖ್ಯಮಂತ್ರಿಯಾದ ಪನ್ನೀರ್ ಸೆಲ್ವಂ ಜಯಾ ಅವರ ಕಚೇರಿ, ಕುರ್ಚಿ ಬಳಸದೇ ಸ್ವಾಮಿನಿಷ್ಠೆ ಮೆರೆದಿದ್ದರು.

5 ತಿಂಗಳ ಬಳಿಕ ಸಿ.ಎಂ. ಕುರ್ಚಿಯನ್ನು ಪಳನಿಸ್ವಾಮಿ ಬಳಸಿದ್ದಾರೆ. ಜಯಾ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಪ್ರಮುಖ ಆಶ್ವಾಸನೆಗಳನ್ನು ಇದೀಗ ಮುಖ್ಯಮಂತ್ರಿಯಾದ ಪಳನಿಸ್ವಾಮಿ ಕುರ್ಚಿಯ ಮೇಲೆ ಕುಳಿತು ಈಡೇರಿಸುವ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...