alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರ್ಟ್ ಬ್ರೇಕಿಂಗ್! ಪತಿ ಸಾವಿನ ಸುದ್ದಿ ಓದಿದ ನಿರೂಪಕಿ

news-niru

ರಾಯ್ ಪುರ: ಛತ್ತೀಸ್ ಗಡದ ಖಾಸಗಿ ವಾಹಿನಿಯ ನಿರೂಪಕಿಯೊಬ್ಬರು, ನಿಷ್ಠೆಯಿಂದ ತಮ್ಮ ಕೆಲಸವನ್ನು ಮಾಡುವ ಮೂಲಕ ಎಲ್ಲರಿಂದ ಸೈ ಎನಿಸಿಕೊಂಡಿದ್ದಾಳೆ.

ಆಕೆಯ ವೃತ್ತಿಪರತೆಗೆ ಎಲ್ಲರೂ ಹ್ಯಾಟ್ಸಾಫ್ ಹೇಳಿದ್ದಾರೆ. ಅಂದ ಹಾಗೆ ನಿರೂಪಕಿ ಹೆಸರು ಸುಪ್ರೀತ್ ಕೌರ್. ಐ.ಬಿ.ಸಿ.- 24 ನ್ಯೂಸ್ ಚಾನಲ್ ನಿರೂಪಕಿಯಾಗಿರುವ ಕೌರ್ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಆಕೆ ವಾರ್ತೆ ಓದುವ ಸಂದರ್ಭದಲ್ಲೇ ಬ್ರೇಕಿಂಗ್ ನ್ಯೂಸ್ ಒಂದು ಬಂದಿದೆ. ಮಹಾಸಮದ್ ಜಿಲ್ಲೆಯ ವರದಿಗಾರ ನೀಡಿದ ಅಪಘಾತದ ಸುದ್ದಿ ಅದಾಗಿತ್ತು.

ರೆನಾಲ್ಟ್ ಡಸ್ಟರ್ ಕಾರ್ ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೂವರಲ್ಲಿ ಸುಪ್ರೀತ್ ಕೌರ್ ಪತಿ ಕೂಡ ಇದ್ದರು.

ನ್ಯೂಸ್ ಓದುವ ಮೊದಲು ಆಕೆ ಗಂಡನೊಂದಿಗೆ ಮಾತನಾಡಿದ್ದಳು. ಅದಾಗಿ ಕೆಲ ಸಮಯದಲ್ಲೇ ಬ್ರೇಕಿಂಗ್ ನ್ಯೂಸ್ ಬಂದಿದೆ. ವರದಿಗಾರ ನೀಡಿದ ಮಾಹಿತಿಯಂತೆ ಆಕೆಗೆ ತನ್ನ ಪತಿ ಮತ್ತು ಆತನ ಸ್ನೇಹಿತರು ಮೃತಪಟ್ಟಿರುವುದು ಗೊತ್ತಾಗಿದೆ.

ದುಃಖವಾದರೂ ಅದನ್ನು ತೋರಗೊಡದ ಸುಪ್ರೀತ್ ಕೌರ್, ಸಂಪೂರ್ಣ ಸುದ್ದಿಯನ್ನು ವಾಚಿಸಿದ್ದಾರೆ. ಸುದ್ದಿ ಮುಗಿಸಿ ಹೊರಗೆ ಬಂದವರೇ ಗೋಳಾಡಿದ್ದಾರೆ. ಅಲ್ಲಿದ್ದವರೆಲ್ಲ ಸಮಾಧಾನಪಡಿಸಿದ್ದಾರೆ. ಮಾತ್ರವಲ್ಲ, ಕೌರ್ ವೃತ್ತಿ ನಿಷ್ಠೆಗೆ ಹ್ಯಾಟ್ಸಾಫ್ ಹೇಳಿದ್ದಾರೆ.

ಸುದ್ದಿ ಮನೆಯ ಹೃದಯ ವಿದ್ರಾವಕ ಸನ್ನಿವೇಶ ಇದಾಗಿದೆ. ಆಕೆಯ ದುಃಖದಲ್ಲಿ ನಾವೆಲ್ಲರೂ ಭಾಗಿಗಳು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...