alex Certify
ಕನ್ನಡ ದುನಿಯಾ       Mobile App
       

Kannada Duniya

ಮಂತ್ರಿಯ ಸೆಕ್ಸ್ ವಿಡಿಯೋ : ಮಾಜಿ ಪತ್ರಕರ್ತ ಅರೆಸ್ಟ್

ನವದೆಹಲಿ: ಛತ್ತೀಸ್ ಗಢ ಪೊಲೀಸರು ಉತ್ತರ ಪ್ರದೇಶದ ಇಂದ್ರಾಪುರ್ ನಲ್ಲಿ ಬಿ.ಬಿ.ಸಿ.ಯ ಮಾಜಿ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಬಂಧಿಸಿದ್ದಾರೆ.

ದೆಹಲಿಯ ಎನ್.ಸಿ.ಆರ್.ನಲ್ಲಿ ಪತ್ರಕರ್ತರಾಗಿದ್ದ ವಿನೋದ್ ವರ್ಮಾ ಇಂದ್ರಾಪುರ್ ನಲ್ಲಿರುವ ನಿವಾಸದಲ್ಲಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ವಿನೋದ್ ವರ್ಮಾ ಅವರನ್ನು ಬಂಧಿಸಿರುವ ಕ್ರಮವನ್ನು ಅನೇಕರು ಖಂಡಿಸಿದ್ದಾರೆ. ರಾತ್ರೋ ರಾತ್ರಿ ಅವರನ್ನು ಬಂಧಿಸಿರುವುದು ಮಾಧ್ಯಮದ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಛತ್ತೀಸ್ ಗಢದ ಸಚಿವರೊಬ್ಬರ ಸೆಕ್ಸ್ ಸಿ.ಡಿ.ಯನ್ನು ಹೊಂದಿದ್ದ ವಿನೋದ್ ವರ್ಮಾ ಬ್ಲಾಕ್ ಮೇಲ್ ಮಾಡಿ ಸಚಿವರಿಂದ ಹಣ ಪಡೆದುಕೊಂಡಿದ್ದು, ಸಚಿವರು ನೀಡಿದ್ದ ದೂರಿನ ಮೇಲೆ ಅವರನ್ನು ಬಂಧಿಸಲಾಗಿದೆ.

ಬಂಧನಕ್ಕೆ ಪೊಲೀಸರು ಅಧಿಕೃತ ಕಾರಣ ನೀಡಿಲ್ಲವಾದರೂ, ಸಚಿವರಿಂದ ಹಣ ಪಡೆದುಕೊಂಡ ಕಾರಣಕ್ಕೆ ಬಂಧಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...