alex Certify
ಕನ್ನಡ ದುನಿಯಾ       Mobile App
       

Kannada Duniya

ಭ್ರಷ್ಟಾಚಾರ ಪ್ರಕರಣದಿಂದ ಪಾರಾಗಲು ಲಂಚ ನೀಡಲು ಮುಂದಾದ ಅಧಿಕಾರಿ

money-8876ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ ಐಎಎಸ್ ಅಧಿಕಾರಿಯೊಬ್ಬರು ಅದರಿಂದ ಪಾರಾಗಲು ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳಿಗೆ 1.5 ಕೋಟಿ ರೂ. ಲಂಚ ನೀಡಲು ಮುಂದಾಗಿದ್ದು, ಈಗ ಅಧಿಕಾರಿ ವಿರುದ್ದ ಈ ಕುರಿತು ಮತ್ತೊಂದು ಪ್ರಕರಣ ದಾಖಲಾಗಿದೆ.

ಛತ್ತೀಸ್ಘಡದ 1988 ರ ಬ್ಯಾಚ್ ಐಎಎಸ್ ಅಧಿಕಾರಿ ಬಾಬುಲಾಲ್ ಅಗರ್ವಾಲ್ ವಿರುದ್ದ ಪ್ರಕರಣ ದಾಖಲಾಗಿದ್ದು, 2010 ರಲ್ಲಿ ಬಾಬುಲಾಲ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಕೋಟ್ಯಾಂತರ ರೂ. ನಗದು ಪತ್ತೆಯಾಗಿತ್ತಲ್ಲದೇ ವಿವಿಧ ಹೆಸರಿನಲ್ಲಿ ಸುಮಾರು 220 ಬ್ಯಾಂಕ್ ಖಾತೆಗಳನ್ನು ಹೊಂದಿರುವುದು ಕಂಡು ಬಂದಿತ್ತು.

ರಮಣಸಿಂಗ್ ನೇತೃತ್ವದ ಸರ್ಕಾರ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತಾದರೂ ಕೇವಲ 4 ತಿಂಗಳಲ್ಲೇ ಮರು ನೇಮಕ ಮಾಡಿಕೊಳ್ಳಲಾಗಿತ್ತು. ಐಟಿ ದಾಳಿ ಸಂಬಂಧ 2011 ರಲ್ಲಿ ಚಾರ್ಜ್ ಶೀಟ್ ದಾಖಲಾಗಿದ್ದು, ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿತ್ತು. ಇದರಿಂದ ಪಾರಾಗಲು ಬಾಬುಲಾಲ್ 1.5 ಕೋಟಿ ರೂ. ಲಂಚ ನೀಡಲು ಮುಂದಾಗಿದ್ದು, ಮೊದಲ ಹಂತವಾಗಿ ಹವಾಲಾ ಡೀಲರ್ ಒಬ್ಬನ ಮುಖಾಂತರ 45 ಲಕ್ಷ ರೂಪಾಯಿಗಳನ್ನು ದೆಹಲಿಯಲ್ಲಿ ಅಧಿಕಾರಿಗಳಿಗೆ ನೀಡಲು ತೆಗೆದುಕೊಂಡು ಹೋಗಲಾಗುತ್ತಿತ್ತು. ಇದೀಗ ಹವಾಲಾ ಡೀಲರ್ ನನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು, ಲಂಚ ನೀಡಲು ಮುಂದಾಗಿದ್ದ ಐಎಎಸ್ ಅಧಿಕಾರಿ ಬಾಬುಲಾಲ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...