alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಪತ್ರೆಯಲ್ಲಿ ದರ್ಪ ತೋರಿ ಫೇಸ್ ಬುಕ್ ನಲ್ಲಿ ಕ್ಷಮೆ ಕೇಳಿದ ಅಧಿಕಾರಿ

n-JAGDISH-SONKAR-456ಪರಿಶೀಲನೆಗೆಂದು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ರೋಗಿಯೊಬ್ಬರ ಬೆಡ್ ಮೇಲೆ ತಮ್ಮ ಬೂಟಗಾಲನಿಟ್ಟು ಮಾತನಾಡಿಸುತ್ತಿದ್ದ ಐಎಎಸ್ ಅಧಿಕಾರಿಯೊಬ್ಬರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಲ್ಲದೇ ಅಧಿಕಾರಿಯ ದರ್ಪದ ಕುರಿತು ತೀವ್ರ ಟೀಕೆಯೂ ಕೇಳಿಬಂದಿತ್ತು.

ಛತ್ತೀಸ್ ಘಡದ ಐಎಎಸ್ ಅಧಿಕಾರಿ ಜಗದೀಶ್ ಸೋನಕರ್ ಅವರನ್ನು ಈ ಕಾರಣಕ್ಕಾಗಿ ಸೇವೆಯಿಂದ ಅಮಾನತ್ತುಗೊಳಿಸಲಾಗಿತ್ತು. ಇದೀಗ ಜಗದೀಶ್ ಸೋನಕರ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮ್ಮ ಅಂದಿನ ವರ್ತನೆ ಕುರಿತು ಬೇಷರತ್ ಕ್ಷಮೆ ಕೋರಿದ್ದಾರೆ.

“This post is to tender an open unconditional apology in response to the picture of mine that is being circulated on social media and newspapers. No amount of words can justify the said act, although it was unintentional and was thoroughly avoidable. I understand the harm the act has inflicted on the image of the civil service fraternity. I apologise to each one of them.” ಎಂದು ಬರೆದುಕೊಂಡಿರುವ ಜಗದೀಶ್ ಸೋನಕರ್, ಸಂದಿಗ್ದ ಪರಿಸ್ಥಿತಿಯಲ್ಲಿ ತಮ್ಮ ಬೆಂಬಲಕ್ಕೆ ನಿಂತವರಿಗೂ ಧನ್ಯವಾದ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...