alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಗರ್ಭಿಣಿ ವಿದ್ಯಾರ್ಥಿನಿಯಿಂದ ಡಾನ್ಸ್ ಮಾಡಿಸಿದ ಪ್ರಾಧ್ಯಾಪಕರು

ಛತ್ತೀಸ್ ಗಢದ ಖಾಸಗಿ ಬಿಎಡ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕರು ಗರ್ಭಿಣಿ ಜೊತೆಗೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. 24 ವರ್ಷದ ಪ್ರತಿಭಾ ಮಿಂಜ್, ಸಂತ್ ಹರ್ಕೆವಾಲ್ ಬಿಎಡ್ ಕಾಲೇಜಿನಲ್ಲಿ ಓದುತ್ತಿದ್ಲು.

2017ರ ಆಗಸ್ಟ್ ನಲ್ಲಿ ಬಿಎಡ್ ಪ್ರವೇಶ ಪಡೆದಿದ್ಲು. ಆ ಸಮಯದಲ್ಲಿ ಪ್ರತಿಭಾ 3 ತಿಂಗಳ ಗರ್ಭಿಣಿ. ಕೋರ್ಸ್ ಮುಗಿಯುವವರೆಗೆ ಗರ್ಭ ಧರಿಸುವುದಿಲ್ಲ ಎಂಬ ಅಫಿಡವಿಟ್ ಒಂದಕ್ಕೆ ಕಾಲೇಜು ಆಡಳಿತ ಮಂಡಳಿ ಸಹಿ ಹಾಕಿಸಿಕೊಂಡಿತ್ತಂತೆ.

ಆದ್ರೆ ಪ್ರತಿಭಾ ಗರ್ಭಿಣಿಯಾಗಿದ್ದರಿಂದ ಆಕೆಗೆ ಪರೀಕ್ಷೆಗೆ ಕೂರಲು ಅವಕಾಶ ಕೊಡುವುದಿಲ್ಲವೆಂದು ಬೆದರಿಸಿತ್ತು. ಡಿಸೆಂಬರ್ ನಲ್ಲಿ ಪ್ರಾಕ್ಟಿಕಲ್ ಎಕ್ಸಾಮ್ ಇತ್ತು. ಆ ಸಮಯದಲ್ಲಿ ಪ್ರತಿಭಾ 7 ತಿಂಗಳ ಗರ್ಭಿಣಿ. ಪರೀಕ್ಷೆ ನಿಮಿತ್ತ ನೃತ್ಯ ಮಾಡುವಂತೆ ಪ್ರಾಧ್ಯಾಪಕರು ಪ್ರತಿಭಾಗೆ ಸೂಚಿಸಿದ್ದಾರೆ.

ಗರ್ಭಿಣಿಯಾಗಿರುವುದರಿಂದ ತನಗೆ ವಿನಾಯಿತಿ ನೀಡುವಂತೆ ಬೇಡಿಕೊಂಡರೂ ಸಮ್ಮತಿಸಿಲ್ಲ. ಡಾನ್ಸ್ ಮಾಡದೇ ಇದ್ರೆ ಅಂಕಗಳನ್ನು ಕಡಿತ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೇರೆ ವಿಧಿಯಿಲ್ಲದೇ ಪ್ರತಿಭಾ ನರ್ತಿಸಿದ್ದಾಳೆ. ಅದನ್ನು ನೋಡಿ ಪ್ರಾಧ್ಯಾಪಕರು ಅಪಹಾಸ್ಯ ಮಾಡಿ, ನಕ್ಕಿದ್ದಾರಂತೆ.

ಫೆಬ್ರವರಿ 4ರಂದು ಪ್ರತಿಭಾಗೆ ಹೆರಿಗೆ ಆಗಿದೆ. ಅಲ್ಲಿಯವರೆಗೂ ಆಕೆ ತರಗತಿಗೆ ಗೈರಾಗಿಲ್ಲ. ಶೇ.94ರಷ್ಟು ಹಾಜರಾತಿ ಹೊಂದಿದ್ದಾಳೆ. ಶಿಕ್ಷಕರ ಅಮಾನವೀಯ ವರ್ತನೆ ಬಗ್ಗೆ ಪ್ರಾಂಶುಪಾಲರಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...