alex Certify
ಕನ್ನಡ ದುನಿಯಾ       Mobile App
       

Kannada Duniya

ಘೋರ ದುರಂತ ಕಣ್ಣೆದುರಿಗಿದ್ದರೂ ಜನ ಇನ್ನೂ ಕಲಿತಿಲ್ಲ ಬುದ್ಧಿ

ದಸರಾ ವೇಳೆ ಅಮೃತಸರದಲ್ಲಿ ನಡೆದ ಘೋರ ರೈಲ್ವೆ ದುರಂತ ಪ್ರಕರಣ ಜನರ ಮನಸಿಂದ ಮಾಸಿಹೋದಂತಿದೆ.

ಕಳೆದ ತಿಂಗಳು ದಸರಾ ಸಂಭ್ರಮದಲ್ಲಿದ್ದ 61 ಮಂದಿ ವೇಗದ ರೈಲಿಗೆ ಸಿಲುಕಿ ಮೃತಪಟ್ಟಿದ್ದರು. ಆದರೆ, ಭೀತಿ ಹುಟ್ಟಿಸುವ ದುರಂತ ಜನರಿಗೆ ನೆನಪೇ ಇಲ್ಲವೆಂಬಂತೆ ಅದೇ ರಾಜ್ಯದ ಭತಿಂದಾ ಎಂಬ ಊರಿನ ಬಳಿ ನೂರಾರು ಮಂದಿ ಛಾತ್ ಪೂಜೆಗೆ ತೆರಳಲು ರೈಲ್ವೆ ಹಳಿಯ ಮೇಲೆ ಮುಂಜಾಗ್ರತೆ ವಹಿಸದೇ ಇರುವುದು ಕಂಡುಬಂದಿದೆ.

ಅತಿ ಬ್ಯುಸಿ ಎನಿಸಿದ ರೈಲ್ವೆ ಟ್ರಾಕ್ ನ್ನು ದಾಟಿಕೊಂಡು ಛಾತ್ ಪೂಜೆಯಲ್ಲಿ ಪಾಲ್ಗೊಂಡ ಜನ ಯಾವುದೇ ಮುಂಜಾಗ್ರತೆಯನ್ನೂ ವಹಿಸಿಲ್ಲ. ಸ್ಥಳೀಯ ಆಡಳಿತ, ಪೊಲೀಸರು ಎಷ್ಟೇ ಹೇಳಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಜನರಿರಲಿಲ್ಲ. ಮಹಿಳೆಯರು ತಮ್ಮ ತೋಳುಗಳಲ್ಲಿ ಸಣ್ಣ ಮಕ್ಕಳನ್ನು ಹಿಡಿದುಕೊಂಡು ಹಳಿ ದಾಟುತ್ತಿರುವುದು ಕಂಡುಬಂದಿದೆ. ಅತಿ ವೇಗದಲ್ಲಿ ಸಂಚರಿಸುವ ರೈಲುಗಳು ಇದೇ ಮಾರ್ಗವಾಗಿ ಹಾದು ಹೋಗುವುದು ಗಮನದಲ್ಲಿದ್ದರೂ ಜನರು ಆ ಬಗ್ಗೆ ಎಚ್ಚರಿಕೆ ವಹಿಸಲೇ ಇಲ್ಲ.

ಅಂತಿಮವಾಗಿ ದುರ್ಘಟನೆಗಳಾದಾಗ ಆಡಳಿತ ಯಂತ್ರವನ್ನೇ ದೂಷಿಸುವ ಜನ ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ಹೊಂದುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...