alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋ ರೈಲಿಗೆ ಸಿಲುಕಿ ಕಾಲು ಕಳೆದುಕೊಂಡ ಯುವಕ

chennai metroಚೆನ್ನೈನಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿ 11 ತಿಂಗಳಾಗಿದ್ದು, ಇದೇ ಮೊದಲ ಬಾರಿಗೆ ಅವಘಡವೊಂದು ನಡೆದಿದೆ. ಬುಧವಾರದಂದು ಯುವಕನೊಬ್ಬ ಮೆಟ್ರೋ ರೈಲು ಬರುತ್ತಿದ್ದ ವೇಳೆ ಅದರ ಮುಂದೆ ಹಾರಿ ಆತ್ಮಹತ್ಯೆಗೆತ್ನಿಸಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಯುವಕ ಸಾವಿನಿಂದ ಪಾರಾಗಿದ್ದಾನೆ.

ಬುಧವಾರದಂದು ಈ ಘಟನೆ ನಡೆದಿದ್ದು, ಯುಕೆ ಯಿಂದ ಮರಳಿದ್ದ 26 ವರ್ಷದ ಸುಧಾಮನ್ ಪಾರ್ಥಸಾರಥಿ ಎಂಬಾತ ಅಳಂದೂರು- ಕೋಯಂಬೇಡು ಮಾರ್ಗದ ಮೆಟ್ರೋ ರೈಲು, ವಡಪಳನಿ ನಿಲ್ದಾಣದ ಬಳಿ ಬರುತ್ತಿದ್ದ ವೇಳೆ ಹಳಿಯ ಮೇಲೆ ಹಾರಿದ್ದಾನೆ. ಇದನ್ನು ಗಮನಿಸಿದ ಚಾಲಕ ತಕ್ಷಣವೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ.

ಆದರೂ ಯುವಕನ ಕಾಲು ರೈಲಿಗೆ ಸಿಲುಕಿದ್ದು, ಗಾಯಗೊಂಡಿರುವ ಆತನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪೊರುರು ನಿವಾಸಿಯಾಗಿರುವ ಯುವಕ ಈ ಹಿಂದೆ ಯುಕೆ ಯಲ್ಲಿದ್ದನೆಂದು ಹೇಳಲಾಗಿದ್ದು, ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...