alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಕೀಸ್ ನಲ್ಲೇ ಯುವಕ, ಯುವತಿಯರಿಗೆ ಗೂಸಾ: ಕಾರಣ ಗೊತ್ತಾ..?

ceheni

ಚೆನ್ನೈ: ಸುಪ್ರೀಂ ಕೋರ್ಟ್, ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದೆ. ಸಿನಿಮಾ ಪ್ರದರ್ಶನದ ಆರಂಭದಲ್ಲಿ ರಾಷ್ಟ್ರಗೀತೆ ವೇಳೆ ದಿವ್ಯಾಂಗರನ್ನು ಹೊರತುಪಡಿಸಿ ಎಲ್ಲರೂ ಎದ್ದು ನಿಲ್ಲಬೇಕೆಂದು ಸೂಚಿಸಿದೆ.

ಹೀಗಿದ್ದರೂ, ಚೆನ್ನೈನ ಚಿತ್ರಮಂದಿರವೊಂದರಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಯುವಕ- ಯುವತಿಯರ ಮೇಲೆ ಹಲ್ಲೆ ಮಾಡಲಾಗಿದೆ. ಚೆನ್ನೈನ ಕಾಸಿ ಚಿತ್ರಮಂದಿರದಲ್ಲಿ ‘ಚೆನ್ನೈ 28’ ಸಿನಿಮಾ ವೀಕ್ಷಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೂವರು ಯುವತಿಯರು ಸೇರಿದಂತೆ 7 ಮಂದಿ ಯುವಕರು ರಾಷ್ಟ್ರಗೀತೆ ಪ್ರಸಾರ ಮಾಡುವಾಗ ನಿಲ್ಲದೇ ಅಗೌರವ ತೋರಿದ್ದರಿಂದ ಥಿಯೇಟರ್ ನಲ್ಲಿದ್ದ ಕೆಲವರು ಗುಂಪುಗೂಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೆ ಒಳಗಾದವರು ವಿದ್ಯಾರ್ಥಿ ಸಂಘಟನೆಯೊಂದರ ಕಾರ್ಯಕರ್ತರಾಗಿದ್ದು, ರಾಷ್ಟ್ರಗೀತೆ ಪ್ರಸಾರಕ್ಕೆ ಚಿತ್ರಮಂದಿರ ಸೂಕ್ತವಾದ ಸ್ಥಳವಲ್ಲ ಎಂಬ ಕಾರಣದಿಂದ ಎದ್ದು ನಿಂತಿರಲಿಲ್ಲ ಎನ್ನಲಾಗಿದೆ.

ಇದನ್ನು ಒಪ್ಪದ ವೀಕ್ಷಕರು ರಾಷ್ಟ್ರಗೀತೆ ಪ್ರಸಾರವಾಗುವಾಗ ಎದ್ದು ನಿಲ್ಲದೇ ಅಗೌರವ ತೋರಿದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಬೇಕೆಂದು ಮಂದಿರದ ವ್ಯವಸ್ಥಾಪಕರ ಬಳಿ ಒತ್ತಾಯಿಸಿದ್ದಾರೆ. ಆ ನಂತರ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...