alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರೋ ಈ ಮದುವೆ ಫೋಟೋದಲ್ಲಿ ಅಂಥದ್ದೇನಿದೆ?

ಚೆನ್ನೈನಲ್ಲಿ ನಡೆದ ಮದುವೆಯೊಂದರ ಪೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮಗಳನ್ನು ತೊಡೆ ಮೇಲೆ ಕೂರಿಸಿಕೊಂಡು ತಾಯಿಯೇ ಕನ್ಯಾದಾನ ಮಾಡಿರುವ ದೃಶ್ಯ ಅದು. ಸಾಮಾನ್ಯವಾಗಿ ತಂದೆ ಕನ್ಯಾದಾನ ಶಾಸ್ತ್ರ ನೆರವೇರಿಸುತ್ತಾರೆ.

ಆದ್ರೆ ರಾಜೇಶ್ವರಿ ಶರ್ಮಾ ಸಿಂಗಲ್ ಮದರ್ ಆಗಿರೋದ್ರಿಂದ ಮಗಳ ಕನ್ಯಾದಾನವನ್ನು ತಾವೇ ಮಾಡಿದ್ದಾರೆ. ಮಗಳಿಗೆ ತಂದೆ ಮತ್ತು ತಾಯಿ ಎರಡೂ ತಾವೇ ಆಗಿರುವುದರಿಂದ ಅವಳನ್ನು ನಾನೇ ಧಾರೆಯೆರೆದು ಕೊಟ್ಟಿದ್ದೇನೆ ಅಂತಾ ರಾಜೇಶ್ವರಿ ಬರೆದುಕೊಂಡಿದ್ದಾರೆ.

ರಾಜೇಶ್ವರಿ ತಮಿಳು ಬ್ರಾಹ್ಮಣ ಕುಟುಂಬದವರು. 21ನೇ ವರ್ಷಕ್ಕೆ ಆಕೆಗೆ ಮದುವೆಯಾಗಿತ್ತು. ನಂತರ ಪತಿಯ ಜೊತೆಗೆ ಆಸ್ಟ್ರೇಲಿಯಾಕ್ಕೆ ಶಿಫ್ಟ್ ಆಗಿದ್ದರು. ಆದ್ರೆ ಮದುವೆಯಾಗಿ 17 ವರ್ಷಗಳ ಬಳಿಕ ಪತಿ, ರಾಜೇಶ್ವರಿಯಿಂದ ದೂರವಾಗಿದ್ದ.

ಮಗಳು ಆಸ್ಟ್ರೇಲಿಯಾದ ಯುವಕ ಸ್ಯಾಮ್ ನನ್ನು ಇಷ್ಟಪಟ್ಟಿದ್ದಳು. ಚೆನ್ನೈನಲ್ಲಿ ಶಾಸ್ತ್ರೋಕ್ತವಾಗಿ ಅವರ ಮದುವೆ ನೆರವೇರಿದೆ. ಹಿಂದು ಸಂಪ್ರದಾಯದಂತೆ ಮದುವೆಯಾಗಬೇಕೆಂದು ಸ್ಯಾಮ್ ಆಸೆಪಟ್ಟಿದ್ದ. ಮಗಳು ಸಂಧ್ಯಾಳನ್ನು ತೊಡೆ ಮೇಲೆ ಕೂರಿಸಿಕೊಂಡು ತಾಯಿ ಕನ್ಯಾದಾನ ಮಾಡಿದ್ದಾರೆ.

Posted by Shot Stories by Varun Suresh on Thursday, February 1, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...