alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಹಸ ಮಾಡಿದ 3 ವರ್ಷದ ಮಗುವಿನ ತಾಯಿಗೆ ಹೇಳಿ ಹ್ಯಾಟ್ಸಾಫ್

ಚೆನ್ನೈ: ಚೆನ್ನೈನ ಮಹಿಳೆಯೊಬ್ಬರು ಯೋಗದಲ್ಲಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. ನಿರಂತರವಾಗಿ ಯೋಗವನ್ನು ಮಾಡುವ ಮೂಲಕ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಮೂರೂವರೆ ವರ್ಷದ ಮಗುವಿನ ತಾಯಿಯಾಗಿರುವ ಕವಿತಾ ಭಾರಾದಾರನ್ ಅವರೇ ಇಂತಹ ಅಪರೂಪದ ಸಾಧನೆ ಮಾಡಿದವರು. ಡಿಸೆಂಬರ್ 23 ರಂದು ಬೆಳಿಗ್ಗೆ 7 ಗಂಟೆಗೆ ಯೋಗವನ್ನು ಆರಂಭಿಸಿದ ಅವರು ಡಿಸೆಂಬರ್ 28 ರಂದು ಬೆಳಿಗ್ಗೆ 2.02 ಗಂಟೆಯವರೆಗೆ 5 ದಿನಗಳ ಕಾಲ ಯೋಗ ಮಾಡಿದ್ದಾರೆ.

ಈ ಮೂಲಕ ಜೂನ್ 16 ರಿಂದ 20 ರ ವರೆಗೆ ನಾಸಿಕ್ ನ ಪ್ರಾದ್ಯ್ನಾ ಪಾಟೀಲ್ ಮಾಡಿದ್ದ 103 ಗಂಟೆಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಕವಿತಾ ಭಾರಾದಾರನ್ ಇನ್ನೂ ಯೋಗವನ್ನು ಮುಂದುವರೆಸಿದ್ದು, ಡಿಸೆಂಬರ್ 30 ರ ವರೆಗೆ ಯೋಗ ಮಾಡುವುದಾಗಿ ಹೇಳಿದ್ದಾರೆ. ಮ್ಯಾರಥಾನ್ ಯೋಗ ಮಾಡುವ ಮೂಲಕ ಕವಿತಾ ದಾಖಲೆ ಬರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...