alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲ ವಿನಾಯಕ ದೇವಾಲಯಕ್ಕೆ ನೋಟಿನ ಆಲಂಕಾರ

ತಮಿಳರಿಗೆ ಇಂದು ಹೊಸ ವರ್ಷದ ಸಂಭ್ರಮ. ಪ್ರತಿ ವರ್ಷ ಏಪ್ರಿಲ್ 14 ರಂದು ತಮಿಳು ನಾಡಿನ ಜನತೆ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಈ ವಿಶೇಷ ದಿನದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಚೆನ್ನೈನ ಅರುಂಬಕ್ಕಂ ನಲ್ಲಿರುವ ಬಾಲ ವಿನಾಯಕ ದೇವಾಲಯವನ್ನು ವಿಶೇಷವಾಗಿ ಅಲಂಕರಿಸಲಾಗಿದೆ.

ಒಂದಲ್ಲ ಎರಡಲ್ಲ ಬರೋಬ್ಬರಿ 4 ಲಕ್ಷ ಮೊತ್ತದ ನೋಟುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿದೆ. ಭಕ್ತಾದಿಗಳು ಗಣೇಶನ ದರ್ಶನ ಪಡೆಯುತ್ತಿದ್ದಾರೆ.

ಆದರೆ ದೇವಸ್ಥಾನದ ಆಡಳಿತ ಮಂಡಳಿ ದೇವಾಲಯವನ್ನು ನೋಟುಗಳಿಂದ ಅಲಂಕರಿಸಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಹಣವನ್ನು ಹೀಗೆ ಅಲಂಕರಿಸುವುದಕ್ಕಿಂತ ಬಡವರಿಗೆ, ನಿರ್ಗತಿಕರಿಗೆ ನೀಡಿದರೆ ಆ ದೇವರೇ ಮೆಚ್ಚುತ್ತಾನೆ ಎಂಬರ್ಥದ ಅಭಿಪ್ರಾಯವನ್ನು ಟ್ವಿಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...