alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದಾಳೆ ಚೆನ್ನೈನ ಈ ಮಾಡೆಲ್

ga

ಚೆನ್ನೈನ ರೂಪದರ್ಶಿ ಗಾನಮ್ ನಾಯರ್ ಮೂರು ದಿನಗಳಿಂದ ನಾಪತ್ತೆಯಾಗಿದ್ದಾಳೆ. ಕಳೆದ ಶುಕ್ರವಾರದಿಂದ್ಲೇ ಮಾಡೆಲ್ ಕಾಣೆಯಾಗಿದ್ದು, ಆಕೆಯ ಹುಡುಕಾಟಕ್ಕಾಗಿ ಆನ್ ಲೈನ್ ನಲ್ಲೂ ಕ್ಯಾಂಪೇನ್ ಶುರುವಾಗಿದೆ. ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರು ಗಾನಮ್ ಬಗ್ಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಸಾಮಾಜಿಕ ತಾಣಗಳ ಮೂಲಕ ಮನವಿ ಮಾಡಿದ್ದಾರೆ.

gaanam-via-shiv-story_647_052917090227

ಗಾನಮ್ ಸಲೂನ್ ಒಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಾ ಇದ್ಲು. ಫೋಟೋಗ್ರಫಿ ಹಾಗೂ ಮಾಡೆಲಿಂಗ್ ಆಕೆಯ ನೆಚ್ಚಿನ ಹವ್ಯಾಸ. ತಾಯಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ತಂದೆ ದೆಹಲಿಯಲ್ಲಿ ನೆಲೆಸಿದ್ದಾರೆ. ಗಾನಮ್ ಚೆನ್ನೈನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ಲು.

ಶುಕ್ರವಾರ ಬೆಳಗ್ಗೆ ದ್ವಿಚಕ್ರ ವಾಹನ ಏರಿ ಗಾನಮ್ ಕಚೇರಿಗೆ ಹೊರಟಿದ್ಲು. ಆಕೆಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮದುವೆ ವಿಚಾರಕ್ಕೆ ಕುಟುಂಬದವರೊಂದಿಗೆ ಗಾನಮ್ ಮನಸ್ತಾಪ ಹೊಂದಿದ್ದಳು ಎನ್ನಲಾಗ್ತಿದೆ. ಜೊತೆಗೆ ಆಕೆಗೆ ಆರೋಗ್ಯ ಸಮಸ್ಯೆಯೂ ಇತ್ತು ಅಂತಾ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...