alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ನಿಂದ ಹಣ ಬಾರದಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ..?

An ATM centre without security guard in Coimbatore. Story - Subburaj Photo - J Jacksonತನ್ನ ಸಹೋದರಿಯನ್ನು ಕಾಣಲು ಬಂದಿದ್ದ ಆತ, ಬಳಿಕ ಸೆಕೆಂಡ್ ಷೋ ಸಿನಿಮಾ ವೀಕ್ಷಿಸಲು ಹೋಗಿದ್ದಾನೆ. ಸಿನಿಮಾ ವೀಕ್ಷಿಸಿ ಹೊರ ಬಂದ ವೇಳೆ, ಆತನಿಗೆ ತನ್ನ ಬಳಿ ಹಣ ಇಲ್ಲದಿರುವುದರ ಅರಿವಾಗಿದೆ. ಹಾಗಾಗಿ ಹಣ ಪಡೆಯಲೆಂದು ಎಟಿಎಂ ಗೆ ಹೋದವನು ಮಾಡಿದ್ದೇನು ಗೊತ್ತಾ? ಮುಂದೆ ಓದಿ.

ತಮಿಳುನಾಡಿನ ಕುಡಲೂರಿನ ಅಮ್ಮನ್ ಸ್ಟ್ರೀಟ್ ನಿವಾಸಿ 30 ವರ್ಷದ ವೀರನ್, ತನ್ನ ಸಹೋದರಿಯನ್ನು ಕಾಣಲು ಪೆರುಗೂಡಿಗೆ ತೆರಳಿದ್ದಾನೆ. ಆಕೆಯನ್ನು ಮಾತನಾಡಿಸಿದ ಬಳಿಕ ವೀರನ್, ಸೆಕೆಂಡ್ ಶೋ ಸಿನಿಮಾ ನೋಡಲು ವಡಪಳನಿಯಲ್ಲಿರುವ ಥಿಯೇಟರ್ ಗೆ ಹೋಗಿದ್ದಾನೆ.

ಸಿನಿಮಾ ವೀಕ್ಷಿಸಿ, ವಾಪಾಸ್ ಸಹೋದರಿಯ ಮನೆಗೆ ತೆರಳುವ ಸಂದರ್ಭದಲ್ಲಿ ಆತ ಹಣ ಡ್ರಾ ಮಾಡಲು ಎಟಿಎಂ ಗೆ ತೆರಳಿದ್ದಾನೆ. ಆತನ ಗ್ರಹಚಾರ ಕೆಟ್ಟಿತ್ತೋ ಅಥವಾ ಎಟಿಎಂ ಯಂತ್ರದ ಗ್ರಹಚಾರವೇ ಸರಿಯಿರಲಿಲ್ಲವೋ, ವೀರನ್ ಹಣ ಡ್ರಾ ಮಾಡುವಾಗ ಹಣ ಬಂದಿಲ್ಲ. ಇದರಿಂದ ರೊಚ್ಚಿಗೆದ್ದ ವೀರನ್, ಎಟಿಎಂ ಯಂತ್ರವನ್ನು ಪುಡಿಗಟ್ಟಿದ್ದಾನೆ. ಸಾಲದ್ದಕ್ಕೆ ಸಿಸಿ ಟಿವಿ ಕ್ಯಾಮರಾವನ್ನೂ ಹಾಳುಗೆಡವಿದ್ದಾನೆ. ಇದೇ ಸಂದರ್ಭದಲ್ಲಿ ಗಸ್ತು ಪೊಲೀಸರು ಅಲ್ಲಿಗೆ ಆಗಮಿಸಿದ್ದು, ಅವರನ್ನು ಕಾಣುತ್ತಲೇ ವೀರನ್ ಪರಾರಿಯಾಗಿದ್ದಾನೆ. ತಮಗೆ ಸಿಕ್ಕ ಸುಳಿವಿನ ಆಧಾರದ ಮೇಲೆ ಆತನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...