alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಫೋಸಿಸ್ ಕಚೇರಿಯಲ್ಲೇ ಟೆಕ್ಕಿ ನಿಗೂಢ ಸಾವು

infosys

ಚೆನ್ನೈನಲ್ಲಿ ಕೆಲಸ ಮಾಡ್ತಾ ಇದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬ ಕಚೇರಿಯ ಶೌಚಾಲಯದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ. 30 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಇಳಯರಾಜ ಮೃತ ದುರ್ದೈವಿ. ಚೆನ್ನೈನ ಮಹಿಂದ್ರಾ ಸಿಟಿಯಲ್ಲಿರೋ ಇನ್ಫೋಸಿಸ್ ಕಚೇರಿಯಲ್ಲಿ ಈತ ಕೆಲಸ ಮಾಡ್ತಿದ್ದ.

ವಿಲ್ಲುಪುರಂನಲ್ಲಿ ವಾಸವಾಗಿದ್ದ ಇಳಯರಾಜ ದಿಂಡಿವಾನಂನಿಂದ ಪ್ರತಿನಿತ್ಯ ಮಹಿಂದ್ರಾ ಸಿಟಿಗೆ ಪ್ರಯಾಣ ಮಾಡುತ್ತಿದ್ದ. ಸೋಮವಾರ ಎಂದಿನಂತೆ ಕಚೇರಿಗೆ ಬಂದಿದ್ದ. ಆದ್ರೆ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ಬಂದಿರಲಿಲ್ಲ.

ಇಳಯರಾಜನ ಪತ್ನಿ ಮಂಗಳವಾರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾಳೆ. ಮಂಗಳವಾರ ಸಂಜೆ ಕಚೇರಿಯ ರೆಸ್ಟ್ ರೂಮ್ ನಲ್ಲಿ ಇಳಯರಾಜನ ಶವ ಪತ್ತೆಯಾಗಿದೆ. ಮೃತದೇಹದ ಮೈಮೇಲೆ ಬಟ್ಟೆ ಕೂಡ ಇರಲಿಲ್ಲ. ಇನ್ಫೋಸಿಸ್ ಕಚೇರಿಯೊಳಗೆ ಇಳಯರಾಜನ ಕೊಲೆ ನಡೆದಿರಬಹುದು ಅಂತಾ ಶಂಕಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...