alex Certify
ಕನ್ನಡ ದುನಿಯಾ       Mobile App
       

Kannada Duniya

ಕಟಿಂಗ್ ಪ್ಲೇಯರ್ ನಲ್ಲಿ ಅಡಗಿಸಿಟ್ಟಿದ್ದ 6 ಕೆಜಿ ಚಿನ್ನ ಪತ್ತೆ

gold

ಚೆನ್ನೈ ಮತ್ತು ತಮಿಳುನಾಡಿನ ಇತರ ಭಾಗಗಳಲ್ಲಿ ಡಿ ಆರ್ ಐ ತಂಡ ಭರ್ಜರಿ ಬೇಟೆಯಾಡಿದೆ. ಕಟಿಂಗ್ ಪ್ಲೇಯರ್ ನೊಳಕ್ಕೆ ಚಿನ್ನ ಇಟ್ಟು ಸಾಗಿಸುತ್ತಿದ್ದ 8 ಮಂದಿ ಖದೀಮರನ್ನು ಬಂಧಿಸಿದೆ. ದಾಳಿಯಲ್ಲಿ ಒಟ್ಟು 5.9 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಬರೋಬ್ಬರಿ 1.8 ಕೋಟಿ ರೂಪಾಯಿ. ಸ್ಮಗ್ಲರ್ ಗಳು ಕಟಿಂಗ್ ಪ್ಲೇಯರ್ ನ ಹಿಡಿಕೆಯ ಒಳಗೆ ಚಿನ್ನದ ಗಟ್ಟಿಗಳನ್ನು ಅಳವಡಿಸಿದ್ದರು.

ಇವನ್ನೆಲ್ಲ ದುಬೈ ಮತ್ತು ಸಿಂಗಾಪುರದಿಂದ ತರಲಾಗಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈ, ತಿರುಚಿ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಿದ ಅಧಿಕಾರಿಗಳು ಸ್ಮಗ್ಲರ್ ಗಳನ್ನು ಹಿಡಿದಿದ್ದಾರೆ. ಸ್ವಿಫ್ಟ್ ಡಿಸೈರ್ ಕಾರ್ ನ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಗಳನ್ನು ಅಡಗಿಸಿಡಲಾಗಿದೆ ಅನ್ನೋ ಮಾಹಿತಿ ಸಿಕ್ಕಿತ್ತು. ಆದ್ರೆ ತಪಾಸಣೆ ನಡೆಸಿದಾಗ ಹೊಚ್ಚ ಹೊಸ ಕಟಿಂಗ್ ಪ್ಲೇಯರ್ ಗಳಿದ್ವು. ಅದನ್ನು ನೋಡಿ ಅನುಮಾನ ಬಂದು ಪರಿಶೀಲಿಸಿದಾಗ ಅದರ ಒಳಗಡೆ ಇದ್ದ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಚೆನ್ನೈನ ಕೆಲವು ಮನೆಗಳನ್ನು ಕೂಡ ಅಧಿಕಾರಿಗಳು ಜಾಲಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...