alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಂತವಾಗಿದೆ ಮೆಡಿಕಲ್ ವಿದ್ಯಾರ್ಥಿಗಳ ಕುಚೇಷ್ಟೆಗೆ ಒಳಗಾಗಿದ್ದ ನಾಯಿ

chennai-dogಪ್ರಾಣಿ ಪ್ರಿಯರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಚೆನ್ನೈ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮಾಡಿದ ಕುಚೇಷ್ಟೆಗೆ ಮೂರಂತಸ್ತಿನ ಮೇಲಿನಿಂದ ಬಿದ್ದಿದ್ದ ನಾಯಿ ಜೀವಂತವಾಗಿದೆ.

ನಾಯಿಯನ್ನು ಇವರುಗಳು ಕೆಳಕ್ಕೆ ಎಸೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಬಳಿಕ ಅವರಿಬ್ಬರ ಗುರುತು ಪತ್ತೆಯಾಗಿದ್ದು, ಈ ಕೃತ್ಯವೆಸಗಿದ್ದ ಮೆಡಿಕಲ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಗೌತಮ್ ಸುದರ್ಶನ್ ಹಾಗೂ ಅಶೀಶ್ ಪಾಲ್ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೆ ನಾಯಿ ಪರಿಸ್ಥಿತಿ ಏನಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇರದರ ಮಧ್ಯೆ ಕೊನೆಗೂ ಅದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಸಾಮಾಜಿಕ ಕಾರ್ಯಕರ್ತ ಶ್ರವಣ್ ಕೃಷ್ಣನ್, ನಾಯಿ ಸುರಕ್ಷಿತವಾಗಿರುವುದರ ಮಾಹಿತಿಯನ್ನು ಫೋಟೋ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾಲಿಗೆ ಪೆಟ್ಟಾಗಿರುವ ಕಾರಣ ಅದಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಗೌತಮ್ ಸುದರ್ಶನ್ ಹಾಗೂ ಅಶೀಶ್ ಪಾಲ್ ಇನ್ನೂ ನಾಪತ್ತೆಯಾಗಿದ್ದು, ಅವರ ಪತ್ತೆ ಕಾರ್ಯದಲ್ಲಿ ತೊಡಗಿರುವ ಪೊಲೀಸರು, ಪೊಲೀಸ್ ಠಾಣೆಗೆ ಹಾಜರುಪಡಿಸುವಂತೆ ಅವರುಗಳ ಪೋಷಕರಿಗೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...