alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ತಡೆಯಲು ಚಲಿಸುವ ರೈಲಿನಿಂದ್ಲೇ ಜಿಗಿದ ಪೇದೆ

ರೈಲ್ವೆ ರಕ್ಷಣಾ ದಳದ ಪೇದೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ಜಿಗಿದು ಅತ್ಯಾಚಾರವೊಂದನ್ನು ತಡೆದಿದ್ದಾರೆ. MRTS ರೈಲು ವೆಲಾಚೆರಿಯಿಂದ ಚೆನ್ನೈ ಬೀಚ್ ಗೆ ತೆರಳುತ್ತಿತ್ತು. ಪೇದೆ ಕೆ.ಶಿವಾಜಿ ಹಾಗೂ ಸಬ್ ಇನ್ಸ್ ಪೆಕ್ಟರ್ ಎಸ್. ಸುಬ್ಬಯ್ಯ ನೈಟ್ ಬೀಟ್ ಗೆ ಹೊರಟಿದ್ದರು.

ಚಿಂತಾದ್ರಿಪೇಟ್ ನಿಲ್ದಾಣದಿಂದ ರೈಲು ಆಗಷ್ಟೇ ಹೊರಟಿತ್ತು. ಸಮಯ ರಾತ್ರಿ 11.45, ಮಹಿಳೆಯರ ಬೋಗಿಯಿಂದ ಚೀರಾಟ ಕೇಳಿಸಿದೆ. ಆ ರೈಲಿನಲ್ಲಿ ಒಂದು ಬೋಗಿಯಿಂದ ಇನ್ನೊಂದು ಬೋಗಿಗೆ ತೆರಳಲು ಒಳಗಿನಿಂದ ಮಾರ್ಗವಿರಲಿಲ್ಲ. ಹಾಗಾಗಿ ರೈಲು ಪಾರ್ಕ್ ಟೌನ್ ಬಳಿ ಬರುತ್ತಿದ್ದಂತೆ ಪೇದೆ ಶಿವಾಜಿ ಕೆಳಕ್ಕೆ ಜಿಗಿದಿದ್ದಾರೆ.

ಓಡಿ ಹೋಗಿ ಪಕ್ಕದ ಮಹಿಳಾ ಬೋಗಿಗೆ ನುಗ್ಗಿದ್ದಾರೆ. ಅಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸ್ತಾ ಇದ್ದ ಕಾಮುಕನನ್ನು ಎಳೆದು ಹೊರಕ್ಕೆ ಹಾಕಿದ್ದಾರೆ. ಆ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ಲು, ಆಕೆಯ ತುಟಿಗಳಿಂದ ರಕ್ತ ಸೋರುತ್ತಿತ್ತು. ಬಟ್ಟೆಯೆಲ್ಲ ಹರಿದಿತ್ತು. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯ್ತು, ಆರೋಪಿ ಸತ್ಯರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...