alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್ಕಲೇಟರ್ ಮೇಲಿಂದ ಬಿದ್ದು ಬಾಲಕ ಸಾವು

ಚೆನ್ನೈನ ಮಾಲ್ ಒಂದರಲ್ಲಿ ಎಸ್ಕಲೇಟರ್ ಮೇಲಿಂದ ಬಿದ್ದು ಬಾಲಕ ಮೃತಪಟ್ಟಿದ್ದಾನೆ. 5ನೇ ತರಗತಿಯಲ್ಲಿ ಓದುತ್ತಿರುವ 10 ವರ್ಷದ ನವೀನ್ ಕುಮಾರ್ ಮೃತ ಬಾಲಕ. ನವೀನ್ ಹಾಗೂ ಆತನ ಅಕ್ಕ ಗೀತಾ ಎಕ್ಸ್ ಪ್ರೆಸ್ ಅವೆನ್ಯೂ ಮಾಲ್ ಗೆ ವಿಡಿಯೋ ಗೇಮ್ ಆಡಲು ಬಂದಿದ್ದರು.

ನವೀನ್ ಎರಡನೇ ಮಹಡಿಯಲ್ಲಿ ಎಸ್ಕಲೇಟರ್ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನಂತೆ. ಈ ವೇಳೆ ಆತನ ಬ್ಯಾಗ್ ಎಸ್ಕಲೇಟರ್ ಗೆ ಸಿಕ್ಕಿಹಾಕಿಕೊಂಡಿದೆ. ಆತ ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದಾರೆ.

ಆದ್ರೆ ನವೀನ್ ಎಸ್ಕಲೇಟರ್ ನಲ್ಲಿ ಚಲಿಸುತ್ತಿದ್ದಾಗ ಬ್ಯಾಗ್ ಸಿಕ್ಕಿಹಾಕಿಕೊಂಡಿದ್ರಿಂದ ಈ ದುರಂತ ನಡೆದಿದೆ ಅಂತಾ ಆತನ ತಂದೆ ಸುನಿಲ್ ಕುಮಾರ್ ಹೇಳಿದ್ದಾರೆ. ತೀವ್ರ ಗಾಯಗೊಂಡಿದ್ದ ನವೀನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಮಾಲ್ ವಿರುದ್ಧ ತಂದೆ ಸುನಿಲ್ ಪ್ರಕರಣ ದಾಖಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...