alex Certify
ಕನ್ನಡ ದುನಿಯಾ       Mobile App
       

Kannada Duniya

ಕಮಿಷನ್ ಗಾಗಿ ಎಟಿಎಂ ಸೆಕ್ಯೂರಿಟಿಗಳೇ ಮಾಡ್ತಿದ್ದಾರೆ ಈ ಕೆಲಸ

atm-art-gm5fl5b6-1atmx

ಎಟಿಎಂ ಭದ್ರತೆಗಾಗಿ ನೇಮಕಗೊಂಡಿರುವ ಸೆಕ್ಯೂರಿಟಿ ಗಾರ್ಡ್ ಗಳು ಕಮಿಷನ್ ಹೊಡೆಯುವ ಪ್ಲಾನ್ ಶುರುವಿಟ್ಕೊಂಡಿದ್ದಾರೆ. ತಡರಾತ್ರಿ ಜನರ ಓಡಾಟ ವಿರಳವಾಗಿರೋ ಸಮಯದಲ್ಲಿ ಕಮಿಷನ್ ಆಸೆಗೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಜನರಿಗೆ ಸಹಾಯ ಮಾಡ್ತಿದ್ದಾರೆ.

ಆಯ್ದ ಗ್ರಾಹಕರಿಂದ ಡೆಬಿಟ್ ಕಾರ್ಡ್ ಮತ್ತು ಪಾಸ್ ವರ್ಡ್ ಪಡೆದುಕೊಂಡು ಪ್ರತಿ ಕಾರ್ಡ್ ಗೆ ಎರಡು ವಹಿವಾಟಿನಂತೆ ತಲಾ 5000 ರೂಪಾಯಿ ವಿತ್ ಡ್ರಾ ಮಾಡಿಕೊಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕಮಿಷನ್ ಪಡೆಯುತ್ತಿದ್ದಾರೆ. ಚೆನ್ನೈನ ನಂದನಂ ಹಾಗೂ ಅಣ್ಣಾಸಲೈ ಎಟಿಎಂಗಳಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ. ರಾತ್ರಿ 12 ಗಂಟೆಯಾಗುವುದಕ್ಕೂ ಮುನ್ನ ಒಮ್ಮೆ ಹಣ ವಿತ್ ಡ್ರಾ ಮಾಡಿ, 12 ಹೊಡೆದ ಬಳಿಕ ಮತ್ತೊಮ್ಮೆ ಹಣ ತೆಗೆಯುತ್ತಾರೆ.

ಕೇವಲ ಅರ್ಧಗಂಟೆಯಲ್ಲಿ ಕೆಲಸ ಖತಂ, ಸೆಕ್ಯೂರಿಟಿಗೆ ಸ್ವಲ್ಪ ಕಮಿಷನ್ ಕೊಟ್ಟು ಜನರು ಹಣ ಮತ್ತು ಕಾರ್ಡ್ ಪಡೆದುಕೊಂಡು ಹೋಗ್ತಾರೆ. ಕಡಿಮೆ ಮುಖಬೆಲೆಯ ನೋಟು ಬೇಕು ಅಂತಾದ್ರೆ ಅದಕ್ಕೂ ಇವರೇ ಸಹಾಯ ಮಾಡ್ತಾರೆ, ಯಾವ ಎಟಿಎಂನಲ್ಲಿ ಎಷ್ಟು ರೂಪಾಯಿ ಮುಖಬೆಲೆಯ ನೋಟುಗಳಿವೆ ಅನ್ನೋ ಡಿಟೇಲ್ಸ್ ಸೆಕ್ಯೂರಿಟಿಗಳಿಗೆ ಗೊತ್ತು. ಎಟಿಎಂನಲ್ಲಿ ಹಣ ಲೋಡ್ ಆಗ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಗಳು ಸ್ನೇಹಿತರಿಗೆಲ್ಲ ಮೆಸೇಜ್ ಕಳಿಸ್ತಾರಂತೆ, ತೀರಾ ಅಗತ್ಯವಿದ್ದವರು ಕಾರ್ಡ್ ಕೊಟ್ಟು ಹಣ ವಿತ್ ಡ್ರಾ ಮಾಡಿಸಿಕೊಳ್ತಾರೆ, ಖುಷಿಯಿಂದ ಸ್ವಲ್ಪ ಕಮಿಷನ್ ಕೊಡ್ತಾರೆ ಅನ್ನೋದು ಭದ್ರತಾ ಸಿಬ್ಬಂದಿಯ ಮಾತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...