alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಟೆಕ್ಕಿ ಮೇಲೆ ಹಲ್ಲೆ ನಡೆಸಿ ದರೋಡೆ

ಚೆನ್ನೈನಲ್ಲಿ 30 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬಳ ಮೇಲೆ ಹಲ್ಲೆ ಮಾಡಿ, ಅವಳ ಸ್ಕೂಟರ್, ಮೊಬೈಲ್, ಚಿನ್ನದ ಸರವನ್ನು ದರೋಡೆ ಮಾಡಲಾಗಿದೆ. ಹಲ್ಲೆಗೊಳಗಾಗಿರುವ ಪಿ. ಲಾವಣ್ಯ ಜನಥ್ ನವಲೂರ್ ನಲ್ಲಿರೋ Newt Global ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ.

ಬೆಳಗಿನ ಜಾವ 2 ಗಂಟೆಗೆ ಆಕೆಯ ಶಿಫ್ಟ್ ಮುಗಿದಿತ್ತು. ಸ್ಕೂಟರ್ ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ಲು. ಮಾರ್ಗಮಧ್ಯೆ ಅವಳನ್ನು ಅಡ್ಡಗಟ್ಟಿದ ದುಷ್ಕರ್ಮಿ, ತಲೆಗೆ ರಾಡ್ ನಿಂದ ಹೊಡೆದಿದ್ದಾನೆ. ನಂತರ ದ್ವಿಚಕ್ರ ವಾಹನ, ಮೊಬೈಲ್ ಮತ್ತು ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ.

ವಿಜಯವಾಡ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಲಾವಣ್ಯ ಸ್ಥಿತಿ ಗಂಭೀರವಾಗಿದೆ. ಚೆನ್ನೈನಿಂದ 2 ಕಿಮೀ ದೂರದಲ್ಲಿ ಈ ಕೃತ್ಯ ನಡೆದಿದೆ. 2016ರಲ್ಲಿ ಟಿಸಿಎಸ್ ಉದ್ಯೋಗಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಕೊಂದು ಹಾಕಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...