alex Certify
ಕನ್ನಡ ದುನಿಯಾ       Mobile App
       

Kannada Duniya

ಸೆ. 28 ರಂದು ಮೆಡಿಕಲ್ ಶಾಪ್ ಬಂದ್…! ಏಕೆ ಗೊತ್ತಾ…?

ಆನ್ ಲೈನ್ ನಲ್ಲಿ ಔಷಧಿಗಳ ಮಾರಾಟಕ್ಕೆ ಅವಕಾಶ ನೀಡಿದ್ದರ ವಿರುದ್ಧ ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ ಸಂಘಟನೆ ಸೆಪ್ಟಂಬರ್ 28 ರಂದು ಮುಷ್ಕರ ನಡೆಸಲು ತೀರ್ಮಾನಿಸಿದ್ದು, ಅಂದು ಮೆಡಿಕಲ್ ಶಾಪ್ ಬಂದ್ ಇರುತ್ತವೆ.

ಇ-ಫಾರ್ಮಸಿಗೆ ಅವಕಾಶ ನೀಡದಂತೆ ಈ ಮೊದಲೇ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದ್ರೆ ಮನವಿಗೆ ಇನ್ನು ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಸೆ. 28 ರಂದು ದೇಶವ್ಯಾಪಿ ಮೆಡಿಕಲ್ ಶಾಪ್ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಔಷಧಿ ಮಾರಾಟದಿಂದ ಹೋಲ್ ಸೇಲ್ ವ್ಯಾಪಾರಿಗಳಿಗೆ 10% ಆದಾಯ ಸಿಕ್ಕರೆ, ಚಿಕ್ಕ ವ್ಯಾಪಾರಿಗಳಿಗೆ ಶೇ.16 ರಷ್ಟು ಮಾರ್ಜಿನ್ ಲಭಿಸುತ್ತದೆ. ಇದ್ರಿಂದಲೇ ವ್ಯಾಪಾರಿಗಳು ಜೀವನ ನಡೆಸುತ್ತಾರೆ. ಆನ್ ಲೈನ್ ನಲ್ಲಿ ಆಫರ್ ಬಿಡಲಾಗುತ್ತದೆ. ಅಲ್ಲದೆ 50 ರಿಂದ 70 ಪರ್ಸೆಂಟ್ ರಿಯಾಯಿತಿ ನೀಡೋದಾಗಿ ತಿಳಿಸುತ್ತವೆ. ಇದ್ರಿಂದ ಔಷಧಿ ಮಳಿಗೆಗಳಿಗೆ ತೊಂದರೆಯಾಗಲಿದ್ದು ಎಐಒಸಿಡಿ ಪ್ರತಿಭಟನೆಗೆ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...