alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಾಖಲೆಗಾಗಿ ಸತತ 53 ಗಂಟೆ ಅಡುಗೆ ಮಾಡಿದ ಬಾಣಸಿಗ

shef

ಅಡುಗೆ ಅನ್ನೋದು ಒಂದು ಕಲೆ. ಒಬ್ಬೊಬ್ಬರ ಕೈರುಚಿ ಒಂದೊಂದು ಬಗೆಯಾಗಿರುತ್ತದೆ. ಅಡುಗೆಯನ್ನು ಕೇವಲ ಹವ್ಯಾಸವಾಗಿ ಮಾತ್ರವಲ್ಲ ವೃತ್ತಿಯಾಗಿ ಆಯ್ದುಕೊಂಡು ಯಶಸ್ವಿಯಾದವರು ಹಲವರಿದ್ದಾರೆ. ಮಹಾರಾಷ್ಟ್ರದ ವಿಷ್ಣು ಮನೋಹರ್ ಕೂಡ ಪ್ರಸಿದ್ಧ ಬಾಣಸಿಗರಲ್ಲೊಬ್ಬರು.

ವಿಷ್ಣು ಮನೋಹರ್ ಈಗ ಸತತ 53 ಗಂಟೆಗಳ ಕಾಲ ಅಡುಗೆ ಮಾಡುವ ಮೂಲಕ ವಿನೂತನ ವಿಶ್ವದಾಖಲೆ ನಿರ್ಮಿಸಿದ್ದಾರೆ. ಎಪ್ರಿಲ್ 21ರಿಂದ್ಲೇ ವಿಷ್ಣು ಮನೋಹರ್, ಅಡುಗೆ ಮಾಡಲು ಆರಂಭಿಸಿದ್ರು. ಸತತ 53 ಗಂಟೆಗಳ ಕಾಲ ಬಗೆಬಗೆಯ ಸಸ್ಯಾಹಾರಿ ತಿನಿಸುಗಳನ್ನು ತಯಾರಿಸಿದ್ದಾರೆ.

ಈ ಮೂಲಕ ವಿಷ್ಣು ಮನೋಹರ್ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿದ್ದಾರೆ. ಈ ಹಿಂದೆ ಇದೇ ದಾಖಲೆ ಅಮೆರಿಕದ ಬೆಂಜಮಿನ್ ಪೇರಿ ಅವರ ಹೆಸರಲ್ಲಿತ್ತು. ಆತ ಸತತ 40 ಗಂಟೆಗಳ ಕಾಲ ಅಡುಗೆ ಮಾಡಿದ್ದರು. ಎಪ್ರಿಲ್ 21ರಂದು ಬೆಳಗ್ಗೆ 8 ಗಂಟೆಯಿಂದ ಕುಕ್ಕಿಂಗ್ ಶುರು ಮಾಡಿದ್ದ ವಿಷ್ಣು, ಎಪ್ರಿಲ್ 23ರ ಸಂಜೆ 5 ಗಂಟೆವರೆಗೂ ನಿರಂತರವಾಗಿ ಅಡುಗೆ ಮಾಡಿದ್ದಾರೆ.

ಗಿನ್ನಿಸ್ ನಿಯಮದ ಪ್ರಕಾರ ಒಂದು ಗಂಟೆಯ ಅಡುಗೆ ವೇಳೆ 5 ನಿಮಿಷ ವಿಶ್ರಾಂತಿ ಪಡೆಯಬಹುದು. ವಿಷ್ಣು ಒಟ್ಟು 57 ಗಂಟೆಗಳ ಕಾಲ ಅಡುಗೆ ಮಾಡಿದ್ದು, 4 ಗಂಟೆ ವಿಶ್ರಾಂತಿ ಪಡೆದಿದ್ದಾರೆ. ನಾಗ್ಪುರದ ಖ್ಯಾತ ಬಾಣಸಿಗ ವಿಷ್ಣು ತಮ್ಮ ಸಾಧನೆಯನ್ನು ರೈತರಿಗೆ ಸಮರ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...