alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಸವೆನ್ನುವುದು ಕಾಂಗ್ರೆಸ್‍ ರಕ್ತದಲ್ಲೇ ಇದೆ – ಪ್ರತಿಪಕ್ಷದ ವಿರುದ್ಧ ಕಿಡಿಕಾರಿದ ಪ್ರಧಾನಿ

ಮೋಸ ಎನ್ನುವುದು ಕಾಂಗ್ರೆಸ್‍ನ ರಕ್ತದಲ್ಲೇ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. ಮಧ್ಯಪ್ರದೇಶದಲ್ಲಿ ನ. 28ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಛಿಂದ್‍ವಾಲಾದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವುದನ್ನು ಮುಂದುವರಿಸಿದೆ. ಮೋಸ ಅದರ ರಕ್ತದಲ್ಲೇ ಇದೆ. ಆದರೆ ಮಧ್ಯಪ್ರದೇಶದ ಜನರು ಕಾಂಗ್ರೆಸ್‍ಗೆ ಆದ್ಯತೆ ನೀಡುವುದಿಲ್ಲ ಎಂದರು.

ಮಧ್ಯಪ್ರದೇಶದಲ್ಲಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಗೋವನ್ನು ಹೊಗಳುವ ಕಾಂಗ್ರೆಸ್, ಗೋಮೂತ್ರ ಹಾಗೂ ಸಗಣಿ ಬೆರಣಿಯನ್ನು ವಾಣಿಜ್ಯಾತ್ಮಕವಾಗಿ ಉತ್ಪಾದಿಸುವ ಬಗ್ಗೆ ಹೇಳಿದೆ.

ಆದರೆ ಅದೇ ಕಾಂಗ್ರೆಸ್, ಕೇರಳದಲ್ಲಿ ಕರು ಹಾಗೂ ದನಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಿದೆ ಎಂದು ಟೀಕಿಸಿದರು. ನಾನು ಯಾವಾಗಲೂ ಕಾಂಗ್ರೆಸ್ ನಾಯಕರಿಂದ ಟೀಕೆಗೆ ಒಳಗಾಗುತ್ತಿರುತ್ತೇನೆ. ಆದರೆ ಅದರ ಹಿಂದಿನ ಕಾರಣವನ್ನೂ ನಾನು ಬಲ್ಲೆ ಎಂದರು.

ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 28ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...