alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿದವನಿಂದಲೇ ಬಾರ್ ಡ್ಯಾನ್ಸರ್ ಬರ್ಬರ ಹತ್ಯೆ

ಮುಂಬೈನಲ್ಲಿ ಬಾರ್ ಡ್ಯಾನ್ಸರ್ ಹಾಗೂ ಮಾಡೆಲಿಂಗ್ ವೃತ್ತಿ ಮಾಡುತ್ತಿದ್ದ ಯುವತಿಯನ್ನು ಹುಚ್ಚನಂತೆ ಪ್ರೀತಿಸಿದ್ದ ವಿವಾಹಿತನೊಬ್ಬ, ಆಕೆ ಬೇರೊಬ್ಬನೊಂದಿಗೂ ಸಂಬಂಧ ಹೊಂದಿದ್ದಾಳೆಂಬ ಕಾರಣಕ್ಕೆ ಕತ್ತು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೂರತ್ ಸಮೀಪದ ಟಿಂಬಾ ಗ್ರಾಮದ ಫಾರ್ಮ್ ಹೌಸ್ ನಲ್ಲಿ ನಡೆದಿದೆ.

ಸೂರತ್ ನ 30 ವರ್ಷದ ಪ್ರೀತೇಶ್ ಪಟೇಲ್ ಹತ್ಯೆ ಮಾಡಿದವನಾಗಿದ್ದು, ಈ ಮೊದಲೇ ವಿವಾಹಿತನಾಗಿದ್ದ ಈತ, ಎರಡು ವರ್ಷಗಳ ಹಿಂದೆ ಮುಂಬೈನ ಮೀರಾ ರೋಡ್ ನಲ್ಲಿರುವ ಬಾರ್ ಒಂದರಲ್ಲಿ ಡ್ಯಾನ್ಸರ್ ಆಗಿದ್ದ ಪಂಜಾಬ್ ನ ಬಟಿಂಡಾ ಮೂಲದ ಜ್ಯೋತಿ ಅಲಿಯಾಸ್ ನಿಶಾ ಎಂಬಾಕೆಯ ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಪ್ರೀತಿ ಚಿಗುರಿದ್ದು, ಆಕೆಯನ್ನು ಮದುವೆಯಾಗುವ ಸಲುವಾಗಿ ಪ್ರೀತೇಶ್ ಪಟೇಲ್ ತನ್ನ ಪತ್ನಿಗೆ ವಿಚ್ಚೇದನ ನೀಡಿದ್ದನೆನ್ನಲಾಗಿದೆ. 

ಕೆಲ ತಿಂಗಳ ಹಿಂದೆ ಬಟಿಂಡಾಕ್ಕೆ ಶಿಫ್ಟ್ ಆಗಿದ್ದ ಜ್ಯೋತಿಗೆ 1.5 ಕೋಟಿ ರೂ. ಮೌಲ್ಯದ ಫ್ಲಾಟ್ ಒಂದನ್ನು ಪ್ರೀತೇಶ್ ಪಟೇಲ್ ಕೊಡಿಸಿದ್ದನೆನ್ನಲಾಗಿದೆ. ಈ ಮಧ್ಯೆ ಜ್ಯೋತಿ, ಗೌರವ್ ಎಂಬಾತನೊಂದಿಗೆ ಸಂಬಂಧ ಬೆಳೆಸಿದ್ದು, ಈ ವಿಚಾರ ಪ್ರೀತೇಶ್ ಗಮನಕ್ಕೆ ಬಂದಿದೆ.

ಡಿಸೆಂಬರ್ 27 ರಂದು ತನ್ನ ಹುಟ್ಟು ಹಬ್ಬ ಆಚರಣೆಗೆಗಾಗಿ ಜ್ಯೋತಿಯನ್ನು ಫಾರ್ಮ್ ಹೌಸ್ ಗೆ ಕರೆಸಿಕೊಂಡಿದ್ದ ಪ್ರೀತೇಶ್ ಡಿಸೆಂಬರ್ 28 ರಂದು ಆಕೆಯೊಂದಿಗೆ ಮುಂಬೈಗೆ ತೆರಳಿದ್ದು, ಅಲ್ಲಿ ಹೊಸ ವರ್ಷಾಚರಣೆ ಮಾಡಿದ್ದಾರೆ. ಬುಧವಾರದಂದು ಇಬ್ಬರೂ ಫಾರ್ಮ್ ಹೌಸ್ ಗೆ ಬಂದಿದ್ದು, ಗೌರವ್ ಜೊತೆಗಿನ ಸಂಬಂಧ ತೊರೆಯುವಂತೆ ಪ್ರೀತೇಶ್ ಹೇಳಿದನೆನ್ನಲಾಗಿದೆ. ನಿನ್ನ ಪ್ರೀತಿಯ ಸಲುವಾಗಿಯೇ ತಾನು ವಿಚ್ಚೇದನ ಪಡೆದಿರುವುದಾಗಿ ಹೇಳಿ ಆಕೆಯ ಮನವೊಲಿಸಲು ಯತ್ನಿಸಿದ್ದಾನೆ.

ಆಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಕೋಪದ ಭರದಲ್ಲಿ ಆಕೆಯ ಕತ್ತು ಕತ್ತರಿಸಿದ ಪ್ರೀತೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಜ್ಯೋತಿಯ ಚೀರಾಟ ಕೇಳಿದ ಅಕ್ಕಪಕ್ಕದ ನಿವಾಸಿಗಳು ಕೂಡಲೇ ಸ್ಥಳಕ್ಕಾಗಮಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಜ್ಯೋತಿ ಸಾವನ್ನಪ್ಪಿದ್ದು, ಪ್ರೀತೇಶ್ ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...