alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಮನೆ ಖರೀದಿಸುವವರಿಗೆ ಸಿಹಿ ಸುದ್ದಿ

home-loan-oct5-1_647_092415060251

ಹೊಸ ಮನೆ ಕೊಳ್ಳುವವರಿಗೆ, ಖರೀದಿಸಿರುವ ಮನೆಯ ರಿಜಿಸ್ಟ್ರೇಶನ್ ಮಾಡಿಸುವವರಿಗೆಲ್ಲ ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ಕೊಡಲಿದೆ. ಹಸಿರು ವಸತಿ ಘಟಕಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಮತ್ತು ರಿಜಿಸ್ಟ್ರೇಶನ್ ಶುಲ್ಕವನ್ನು ಕೂಡ ಇಳಿಕೆ ಮಾಡಲು ಮುಂದಾಗಿದೆ.

ಶೂನ್ಯ ಇಂಧನ ಕಟ್ಟಡಗಳ ಮೂಲಕ ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವುದು ಸರ್ಕಾರದ ಉದ್ದೇಶ. ಸರ್ಕಾರಿ ಮತ್ತು ವಾಣಿಜ್ಯ ಕಟ್ಟಡಗಳಿಗೆ ಅನ್ವಯವಾಗುವಂತೆ 2007ರಲ್ಲಿ ಜಾರಿ ಮಾಡಿರೋ ವಸತಿ ವಲಯ ಶಕ್ತಿ ಸಂರಕ್ಷಣಾ ಕಟ್ಟಡ ನಿಯಮಕ್ಕೆ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

ಇಂಧನ ದಕ್ಷತೆಯುಳ್ಳ ಮನೆಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಇಂಧನ ದಕ್ಷತೆ ಬ್ಯೂರೋ ಈ ಸಂಬಂಧ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಬೆಳಕು, ಇಂಧನ, ಕೂಲಿಂಗ್ ಎನರ್ಜಿಯ ಅಗತ್ಯ ಅತ್ಯಂತ ಕಡಿಮೆಯಿರುವ ಮನೆಗಳಿಗೆ ಕಡಿಮೆ ದರದಲ್ಲಿ ಸಾಲ ದೊರೆಯಲಿದೆ. ರಿಜಿಸ್ಟ್ರೇಶನ್ ಶುಲ್ಕವೂ ಅಗ್ಗವಾಗಲಿದೆ.

ಮನೆಯಲ್ಲಿ ಅಳವಡಿಸಲಾಗುವ ಸೋಲಾರ್ ಸಿಸ್ಟಮ್ ಗೆ ಇನ್ಸೆಂಟಿವ್ ಕೂಡ ನೀಡಲಾಗುತ್ತದೆ. ಈ ಯೋಜನೆ ಕೂಡ ಕೇಂದ್ರದ ‘ಮೇಕ್ ಇನ್ ಇಂಡಿಯಾ’ದ ಒಂದು ಭಾಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...