alex Certify
ಕನ್ನಡ ದುನಿಯಾ       Mobile App
       

Kannada Duniya

ಚಳಿಗಾಲದ ಶಾಪಿಂಗ್ ಮಾಡಬೇಕಾ? ಇಲ್ಲಿಗೆ ಹೋಗೋದನ್ನ ಮರೆಯಬೇಡಿ

ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ತಿದೆ. ಚಳಿಗಾಲದಲ್ಲಿ ಮೊದಲು ತಡಕಾಡೋದು ಬೆಚ್ಚಗಿನ ಉಡುಪುಗಳನ್ನ. ವರ್ಷದಿಂದ ವರ್ಷಕ್ಕೆ ಟ್ರೆಂಡ್​​ ಬದಲಾಗ್ತಿರೋದ್ರಿಂದ, ಜನರು ಹೊಸ ಸ್ಟೈಲಿಶ್​​ ಆಗಿರೋ ಜ್ಯಾಕೆಟ್​​, ಕ್ಯಾಪ್​​, ಗ್ಲೌಸ್​​ಗಳನ್ನ ಖರೀದಿ​ ಮಾಡೋಕೆ ರೆಡಿಯಾಗ್ತಾರೆ. ಸಿಕ್ಕಿದ್ದೆ ಚಾನ್ಸ್​​ ಅಂತ ಈ ವುಲನ್​​ ಬಟ್ಟೆಗಳ ಬೆಲೆಯನ್ನು ದುಪ್ಪಟ್ಟು ಮಾಡಿ ಒಂದಕ್ಕೆರಡು ಮಾಡಿ ಮಾಲ್ ​​ಗಳಲ್ಲಿ ಮಾರ್ತಿತ್ತಾರೆ.

ವರ್ಷವಿಡಿ ಚಳಿಗಾಲ ಇರಲ್ಲ. ಕೆಲವೇ ಕೆಲವು ತಿಂಗಳ ಚಳಿಗಾಲಕ್ಕೆ ಸಾವಿರಾರು ರೂಪಾಯಿ ಕೊಟ್ಟು ಒಂದೇ ಒಂದು ವುಲನ್​​ ಬಟ್ಟೆ ಖರೀದಿ ಮಾಡುವುದಕ್ಕೆ ಮನಸ್ಸಾಗೊದಿಲ್ಲ. ಚಳಿಗಾಲಕ್ಕೆ ಬೆಚ್ಚಗಿನ ಬಟ್ಟೆಯೂ ಬೇಕು, ಬೆಲೆಯೂ ಕಡಿಮೆ ಇರಬೇಕು ಎನ್ನುವವರಿಗೆ ಈ ಮಾರ್ಕೆಟ್ ಬೆಸ್ಟ್.

ದೆಹಲಿಗೆ ಗಾಂಧಿ ನಗರದ ಮಾರ್ಕೆಟ್​​ಗೆ ಹೋದರೆ ಸಾಕು. ನೀವು ಶಾಕ್​ ಆಗ್ತಿರಾ. ಅಲ್ಲಿರುವ ಒಂದಕ್ಕಿಂತ ಒಂದು ಸ್ಟೈಲಿಶ್​​ ವುಲನ್​ ಬಟ್ಟೆಗಳು 100ರಿಂದ 150 ರೂಪಾಯಿಗೆ ನಿಮಗೆ ಸಿಗುತ್ತೆ. ಇದು ಹೋಲ್​​ ಸೇಲ್​​ ಮಾರ್ಕೆಟ್. ಆದ್ರೆ ನಿಮಗೆ ಬೇಕಾದ ಬಟ್ಟೆಯನ್ನು ನೀವು ಖರೀದಿ ಮಾಡಬಹುದು. ಆರಂಭದಲ್ಲಿ ವ್ಯಾಪಾರಿಗಳು ಸಾವಿರದ ಮೇಲೆ ಬಟ್ಟೆ ಬೆಲೆ ಹೇಳ್ತಾರೆ. ಆದ್ರೆ ಚೌಕಾಶಿ ಮಾಡಿದ್ರೆ ಮಾತ್ರ ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತೆ.

ದೆಹಲಿಯ ಗಾಂಧಿನಗರದಲ್ಲಿ ಕಂಡು ಬರುವ ಈ ಮಾರ್ಕೆಟ್​ನಲ್ಲಿ ಸುಮಾರು 15 ಸಾವಿರಕ್ಕಿಂತಲೂ ಹೆಚ್ಚು ಅಂಗಡಿಗಳಿವೆ. ಈ ಮಾರ್ಕೆಟ್​ನ ಇನ್ನೊಂದು ವಿಶೇಷವೆಂದ್ರೆ ಇದು ಏಷ್ಯಾದ ಅತಿ ದೊಡ್ಡ ಸಗಟು ಮಾರುಕಟ್ಟೆಯಾಗಿದೆ. ಇಲ್ಲಿನ ಜನರೇ ಬಟ್ಟೆ ಖರೀದಿಸಿ ಹೊಲಿಯುವುದರಿಂದ ಇಲ್ಲಿ ಈ ವುಲನ್​ ಬಟ್ಟೆಗಳ ಬೆಲೆ ಕಡಿಮೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...