alex Certify
ಕನ್ನಡ ದುನಿಯಾ       Mobile App
       

Kannada Duniya

ಶುದ್ದೀಕರಣದ ಹೆಸರಿನಲ್ಲಿ ಬಾಲಕಿಯ ತಲೆ ಬೋಳಿಸಿದ ಗ್ರಾಮಸ್ಥರು…!

ಛತ್ತೀಸ್ ಗಢದ ಕವರ್ಧ ಜಿಲ್ಲೆಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಲೈಂಗಿಕ ಕಿರುಕುಳಕ್ಕೊಳಗಾಗಿದ್ದ 13 ವರ್ಷದ ಬಾಲಕಿಯನ್ನು ಶುದ್ಧೀಕರಣ ಮಾಡಲು ಗ್ರಾಮಸ್ಥರೆಲ್ಲ ಸೇರಿ ಅವಳ ಅರ್ಧ ತಲೆಯನ್ನೇ ಬೋಳಿಸಿದ್ದಾರೆ. ಬಾಲಕಿಯ ತಲೆ ಬೋಳಿಸಿ ಶುದ್ಧೀಕರಣ ಮಾಡುವಂತೆ ಸ್ಥಳೀಯ ಪಂಚಾಯ್ತಿ ಮುಖಂಡರು ಆದೇಶಿಸಿದ್ದರು.

ಅದೇ ಗ್ರಾಮದ ವ್ಯಕ್ತಿ ಅರ್ಜುನ್ ಯಾದವ್ ಎಂಬಾತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಆದ್ರೆ ಅವನಿಗೆ ಯಾವುದೇ ಶಿಕ್ಷೆ ವಿಧಿಸಿಲ್ಲ, ಆತ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಆದ್ರೆ ನೊಂದ ಬಾಲಕಿಗೇ ಬಹಿಷ್ಕಾರ ಹಾಕಬೇಕೆಂದು ಪಂಚಾಯ್ತಿ ಮುಖಂಡರು ನಿರ್ಧರಿಸಿದ್ದರು.

ಇದೀಗ ಆರೋಪಿಯನ್ನು ಬಂಧಿಸಿರೋ ಪೊಲೀಸರು, ಬಾಲಕಿಗೆ ಅಮಾನವೀಯ ಶಿಕ್ಷೆ ನೀಡಿದ ಊರಿನ ಮುಖಂಡರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ರಾಜಕಾರಣಿಯೊಬ್ಬರ ಸಂಬಂಧಿ ಎನ್ನಲಾಗಿದೆ. ಕುಡಿದ ಅಮಲಿನಲ್ಲಿ ಆತ ಬಾಲಕಿ ಮೇಲೆ ಕೈಹಾಕಿದ್ದ.

 

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...