alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ ಆಂಧ್ರ ಸಿಎಂ

chandrababu-naidu500 ಹಾಗೂ 1000 ರೂ. ನೋಟುಗಳ ಚಲಾವಣೆ ರದ್ದಾದ ಬಳಿಕ ಹಣ ಬದಲಾವಣೆಗೆ ಹಾಗೂ ಬ್ಯಾಂಕ್ ನಿಂದ ಹಣ ಡ್ರಾ ಮಾಡಲು ಸಾರ್ವಜನಿಕರು ಪರಿತಪಿಸುತ್ತಿದ್ದಾರೆ. ಈಗ ಹಣ ಬದಲಾವಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಹಳೆಯ 500 ಮತ್ತು 1000 ರೂ. ನೋಟುಗಳನ್ನು ಬ್ಯಾಂಕ್ ಖಾತೆಗೆ ಮಾತ್ರ ಜಮಾ ಮಾಡಬಹುದಾಗಿದೆ.

ಅಗತ್ಯಕ್ಕೆ ಹಣ ಸಿಗದೆ ಹಲವರು ಇನ್ನಿಲ್ಲದ ಸಂಕಷ್ಟವನ್ನು ಎದುರಿಸಿದ್ದು, ಹೀಗೆ ಸಂಕಷ್ಟಕ್ಕೆ ಸಿಲುಕಿದ್ದ ಮಹಿಳೆಯೊಬ್ಬರ ನೆರವಿಗೆ ನಿಲ್ಲುವ ಮೂಲಕ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾನವೀಯತೆ ಮೆರೆದಿದ್ದಾರೆ.

ನೆಲ್ಲೂರಿನ ಸೀತಾರತ್ನಂ ಎಂಬ ಮಹಿಳೆಯ ಪತಿಯ ಸಹೋದರಿಯ ಪತಿ ಗಿರಿಧರ್ ಎಂಬಾತ ಅಪಘಾತದಲ್ಲಿ ಸಾವನ್ನಪ್ಪಿದ್ದು, ಅವರ ಅಂತ್ಯಕ್ರಿಯೆ ನೆರವೇರಿಸಲು ಹಣವಿಲ್ಲದೆ ಕುಟುಂಬ ಪರದಾಡುತ್ತಿತ್ತು. ಸೀತಾರತ್ನಂ ಹಣ ಪಡೆಯಲು ಬ್ಯಾಂಕ್ ಗೆ ಬಂದಿದ್ದು, ಸಕಾಲಕ್ಕೆ ಹಣ ಸಿಗದ ಕಾರಣ ಕಣ್ಣೀರಿಡುತ್ತಿದ್ದರು. ಈ ದೃಶ್ಯವನ್ನು ಸೆರೆ ಹಿಡಿದಿದ್ದ ಚಾನೆಲ್ ಒಂದು ಸುದ್ದಿಯನ್ನು ಪ್ರಸಾರ ಮಾಡಿತ್ತು. ಇದನ್ನು ನೋಡಿದ ಚಂದ್ರಬಾಬು ನಾಯ್ಡು ಕೂಡಲೇ ನೆಲ್ಲೂರು ಕಲೆಕ್ಟರ್ ಗೆ ಕರೆ ಮಾಡಿ ಮಹಿಳೆಯ ನೆರವಿಗೆ ಧಾವಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಕಛೇರಿಯಿಂದ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಹೋಗಿದ್ದು, ಹಣದ ಅಗತ್ಯವಿದ್ದ ಮಹಿಳೆಗೆ ಕೂಡಲೇ ಸಹಾಯ ದೊರೆತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...