alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರಬಾಬು ನಾಯ್ಡುಗಿಂತ ಮೊಮ್ಮಗನೇ ಶ್ರೀಮಂತ !

chandrababu-naiduಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕುಟುಂಬದ ಆಸ್ತಿ ವಿವರವನ್ನು ಘೋಷಿಸಲಾಗಿದ್ದು, ಚಂದ್ರಬಾಬು ನಾಯ್ಡು ಅವರಿಗಿಂತ ಅವರ ಮೊಮ್ಮಗನೇ ಹೆಚ್ಚು ಆಸ್ತಿ ಹೊಂದಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಪುತ್ರ, ತೆಲುಗುದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ತಮ್ಮ ಕುಟುಂಬ ಹೊಂದಿರುವ ಆಸ್ತಿ ವಿವರಗಳನ್ನು ಮಾಧ್ಯಮಗಳ ಮುಂದೆ ಘೋಷಣೆ ಮಾಡಿದ್ದು, ಚಂದ್ರಬಾಬು ನಾಯ್ಡು ಅವರು ಒಟ್ಟು 3.73 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದು, ಜೊತೆಗೆ 3.06 ಕೋಟಿ ರೂಪಾಯಿ ಸಾಲ ಕೂಡಾ ಮಾಡಿದ್ದಾರೆ.

ಹೈದರಾಬಾದಿನ ಜುಬಿಲಿ ಹಿಲ್ಸ್ ನಲ್ಲಿ ಇರುವ ಚಂದ್ರಬಾಬು ನಾಯ್ಡು ಅವರ ನಿವಾಸದ ಮೌಲ್ಯ 3.68 ಕೋಟಿ ರೂ. ಗಳಾಗಿದ್ದು, ಅವರ ಬಳಿ ಇರುವ ಹಳೆಯ ಅಂಬಾಸಿಡರ್ ಕಾರಿನ ಬೆಲೆ 1.52 ಲಕ್ಷ ರೂಪಾಯಿಗಳು. ಚಂದ್ರಬಾಬು ನಾಯ್ಡು ಅವರ ಬ್ಯಾಂಕ್ ಖಾತೆಯಲ್ಲಿ 3.59 ಲಕ್ಷ ರೂ. ಠೇವಣಿ ಇಡಲಾಗಿದೆ. ಚಂದ್ರಬಾಬು ನಾಯ್ಡು ಅವರ ಮೊಮ್ಮಗ, ನಾರಾ ಲೋಕೇಶ್ ರ ಮಗ ದೇವಾಂಶ್ 9.17 ಕೋಟಿ ರೂ. ಮೌಲ್ಯದ ಮನೆ, 2.4 ಕೋಟಿ ರೂ. ಬ್ಯಾಂಕ್ ಠೇವಣಿ ಹಾಗೂ 2.31 ಲಕ್ಷ ರೂ. ನಗದು ಹೊಂದಿದ್ದು, ಚಂದ್ರಬಾಬು ನಾಯ್ಡು ಅವರಿಗಿಂತ ಶ್ರೀಮಂತರಾಗಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ 38.66 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, 13 ಕೋಟಿ ರೂ. ಸಾಲ ಕೂಡಾ ಮಾಡಿದ್ದಾರೆ. ಪುತ್ರ ನಾರಾ ಲೋಕೇಶ್ 14.50 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, 6.35 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ. ನಾರಾ ಲೋಕೇಶ್ ರ ಪತ್ನಿ ಬ್ರಹ್ಮಿಣಿ 5.4 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಚಂದ್ರಬಾಬು ನಾಯ್ಡು ಅವರ ಕುಟುಂಬ, ಹೆರಿಟೇಜ್ ಫುಡ್ಸ್ ಎಂಬ ಉದ್ಯಮ ಹೊಂದಿದ್ದು, ಇದರ ವಾರ್ಷಿಕ ವಹಿವಾಟು 2,321  ಕೋಟಿ ರೂಪಾಯಿಗಳು. ಈ ಬಾರಿ ಕಂಪನಿ 55 ಕೋಟಿ ರೂ. ಲಾಭ ಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...