alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿ ನಾಯಿಗಳಿಗೆ ಆಹಾರವಾಯ್ತು ಪಾರ್ಕ್ ನಲ್ಲಿ ಆಡ್ತಿದ್ದ ಮಗು

ಚಂಡೀಗಢದಲ್ಲಿ ಮನಕಲಕುವ ಘಟನೆ ನಡೆದಿದೆ. ಪಾರ್ಕ್ ನಲ್ಲಿ ಆಡ್ತಿದ್ದ ಒಂದುವರೆ ವರ್ಷದ ಮಗು ಬೀದಿ ನಾಯಿಗಳಿಗೆ ಆಹಾರವಾಗಿದೆ. ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಕೆಲಸ ಮಾಡ್ತಿದ್ದ ಮಹಿಳೆ ನಾಲ್ಕು ಮಕ್ಕಳನ್ನು ಪಾರ್ಕ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಳಂತೆ. ಈ ವೇಳೆ ದುರ್ಘಟನೆ ನಡೆದಿದೆ. ನಾಯಿ ದಾಳಿ ಮಾಡ್ತಿದ್ದಂತೆ ಮೂವರು ಮಕ್ಕಳು ಓಡಿದ್ದಾರೆ. ಮೃತ ಆಯುಷ್ ಚಿಕ್ಕವನಾಗಿದ್ದ ಕಾರಣ ಓಡಲು ಸಾಧ್ಯವಾಗಲಿಲ್ಲ. ಬೀದಿ ನಾಯಿಗಳು ಆತನ ಮೇಲೆ ದಾಳಿ ನಡೆಸಿ ಮೈ ಮೇಲೆಲ್ಲ ಗಾಯ ಮಾಡಿದ್ದವು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆಯುಷ್ ಮೊದಲೇ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಮಧ್ಯ ಹಾಗೂ ಕೇಂದ್ರ ಚಂಡೀಗಢದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಕ್ಕಳನ್ನು ಹೊರಗೆ ಬಿಡುವುದೇ ಕಷ್ಟವಾಗಿದೆ. ಪಾರ್ಕ್ ನಲ್ಲಿ ಬೀದಿ ನಾಯಿಗಳೇ ತುಂಬಿ ಹೋಗಿದ್ದು, ಜನಸಾಮಾನ್ಯರು ಪಾರ್ಕ್ ಗೆ ಹೋಗಲು ಭಯಪಡಿವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...