alex Certify
ಕನ್ನಡ ದುನಿಯಾ       Mobile App
       

Kannada Duniya

501 ರೂ.ಗೆ ಸಿಗಲಿದೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ !

501 smart phoneಕೆಲ ದಿನಗಳ ಹಿಂದಷ್ಟೆ 251 ರೂಪಾಯಿಗೆ ಸ್ಮಾರ್ಟ್ ಫೋನ್ ಸಿಗುತ್ತೆ ಅನ್ನೋ ಸುದ್ದಿ ಸಂಚಲನ ಎಬ್ಬಿಸಿತ್ತು. ಕೋಟ್ಯಂತರ ಮಂದಿ ಏಕಕಾಲಕ್ಕೆ ಮೊಬೈಲ್ ಬುಕ್ಕಿಂಗ್ ಮಾಡಲು ಹೋಗಿ ಸರ್ವರ್ ಕೈಕೊಟ್ಟಿದ್ದು ಈಗ ಇತಿಹಾಸ.

ChampOne  ಕಂಪನಿ ಇದೀಗ 501 ರೂಪಾಯಿಗೆ ಹೊಸ ಆ್ಯಂಡ್ರಾಯ್ಡ್ ಮೊಬೈಲ್ ಕೊಡುವುದಾಗಿ ಪ್ರಕಟಿಸಿದೆ. ChampOne C1 ಹೆಸರಿನ ಈ ಹ್ಯಾಂಡ್ ಸೆಟ್ ನ ಅಸಲಿ ಬೆಲೆ 7,999 ರೂಪಾಯಿ. ಸೆಪ್ಟೆಂಬರ್ 2 ರಂದು ಕಂಪನಿ ಮೊಬೈಲ್ ಲಾಂಚ್ ಮಾಡುತ್ತಿದ್ದು, ಅಂದು ಕೇವಲ 501 ರೂಪಾಯಿಗೆ ನೀವು ಮೊಬೈಲ್ ಖರೀದಿಸಬಹುದು. ರಿಜಿಸ್ಟರ್ ಮಾಡಿಸಿಕೊಳ್ಳಲು ಇಂದೇ ಅವಕಾಶವಿದೆ.

ಆದ್ರೆ ಈಗಲೇ ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ರಿಜಿಸ್ಟ್ರೇಶನ್ ಬಟನ್ ಕೆಲಸ ಮಾಡುತ್ತಿಲ್ಲ. ಇನ್ನು 24 ಗಂಟೆಗಳಲ್ಲಿ ಅದನ್ನು ಸರಿಪಡಿಸುವುದಾಗಿ ಕಂಪನಿ ಹೇಳಿದೆ. ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮೂಲಕ ಮೊಬೈಲ್ ಮಾರಾಟ ಮಾಡುವುದಾಗಿ ತಿಳಿಸಿದೆ. ಗ್ರಾಹಕರಿಗೆ ಸಹಾಯ ಮಾಡಲು 2 ಟೋಲ್ ಫ್ರೀ ನಂಬರ್ ಗಳನ್ನು ಕೊಟ್ಟಿದೆ, ಆದ್ರೆ ಅದಕ್ಕೆ ಕರೆ ಮಾಡಿದ್ರೆ ಯಾರೂ ಉತ್ತರಿಸುತ್ತಿಲ್ಲ. ಇನ್ನು ChampOne C1 ಡ್ಯೂಯಲ್ ಸಿಮ್ ಮೊಬೈಲ್ ಆಗಿದ್ದು, ಆ್ಯಂಡ್ರಾಯ್ಡ್ 5.1 ಲಾಲಿಪಾಪ್ ಹಾಗೂ 2 ಜಿಬಿ ರ್ಯಾಮ್ ನ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5 ಇಂಚಿನ ಎಚ್ ಡಿ ಸ್ಕ್ರೀನ್ ಇದೆ. 16 ಜಿಬಿ ಇನ್ ಬಿಲ್ಟ್ ಸ್ಟೋರೇಜ್ ಕೂಡ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...