alex Certify
ಕನ್ನಡ ದುನಿಯಾ       Mobile App
       

Kannada Duniya

ಚೈನ್ ಕಿತ್ತುಕೊಂಡು ಮೊಬೈಲ್ ಮರೆತ್ಹೋದ ಕಳ್ಳ..!

jail-arrested-arrest-prison311

ಮುಂಬೈನಲ್ಲಿ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಕಳ್ಳನೊಬ್ಬ ಮೊಬೈಲ್ ಬಿಟ್ಟುಹೋಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಜೂನ್ 26 ರಂದು 58 ವರ್ಷದ ಜಸ್ಪಾಲ್ ಸಿಂಗ್ ಐಸ್ ಕ್ರೀಮ್ ಪಾರ್ಲರ್ ಗೆ ಬಂದಿದ್ರು. ಅವರೊಬ್ಬ ಲೇಖಕ, ನಿರ್ಮಾಪಕ ಹಾಗೂ ಬುಟಿಕ್ ಮಾಲೀಕರು.

ಒಶಿವರಾ ಬಸ್ ಡಿಪೋ ಬಳಿ ಮೋಟರ್ ಸೈಕಲ್ನಲ್ಲಿ ಕುಳಿತೇ ಐಸ್ ಕ್ರೀಂ ತಿನ್ನುತ್ತಿದ್ರು. ಅಡ್ರೆಸ್ ಕೇಳುವ ನೆಪದಲ್ಲಿ ಬಂದ ಶೈಲೇಂದ್ರ ಕೋನರ್ ಅಲಿಯಾಸ್ ಸ್ಟಾಲಿನ್ ಎಂಬಾತ ಜಸ್ಪಾಲ್ ಸಿಂಗ್ ರ ಕತ್ತಿನಲ್ಲಿದ್ದ ಚೈನ್ ಕಿತ್ತುಕೊಂಡಿದ್ದ. ಜಸ್ಪಾಲ್ ಸಿಂಗ್ ರನ್ನು ತಳ್ಳಿ ಅಲ್ಲಿಂದ ಓಡಿ ಹೋಗಿದ್ದಾನೆ.

7 ಲಕ್ಷ ರೂಪಾಯಿ ಬೆಲೆಬಾಳುವ ಚೈನ್ ಸಿಕ್ಕ ಖುಷಿಯಲ್ಲಿ ಕಳ್ಳನಿಗೆ ತನ್ನ ಮೊಬೈಲ್ ಕೊಂಡೊಯ್ಯುವುದು ಮರೆತೇ ಹೋಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ, ಫೇಸ್ಬುಕ್ ನಲ್ಲಿ ಆತನ ಅಕೌಂಟ್ ಸಿಕ್ಕಿತ್ತು. ಪೊಲೀಸರು ಆತನ ಫೋಟೋವನ್ನು ಎಲ್ಲಾ ಕಡೆ ಹಂಚಿ, ಯಾರಾದ್ರೂ ಕಂಡರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಿದ್ರು.

ಅಷ್ಟು ದಿನ ಗೋರೆಗಾಂವ್ ನಲ್ಲಿ ವಾಸವಾಗಿದ್ದ ಕಳ್ಳ, ಚೈನ್ ಕಿತ್ತುಕೊಂಡು ತನ್ನ ತವರು ತಮಿಳುನಾಡಿಗೆ ಓಡಿ ಹೋಗಿದ್ದ. ಅಲ್ಲಿ ಅವನ ಮನೆಯನ್ನು ಸುತ್ತುವರಿದ ಪೊಲೀಸರು ಹಿಡಿಯಲು ಪ್ರಯತ್ನಿಸಿದ್ದಾರೆ. ಅಲ್ಲಿಂದ್ಲೂ ಆತ ತಪ್ಪಿಸಿಕೊಂಡಿದ್ದ. ನಂತರ ಸುಮಾರು 12 ಕಿಮೀ ಚೇಸ್ ಮಾಡಿ ಕಳ್ಳನನ್ನು ಹಿಡಿದು, ಚೈನ್ ವಶಪಡಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...