alex Certify
ಕನ್ನಡ ದುನಿಯಾ       Mobile App
       

Kannada Duniya

ವೃದ್ದೆಯ ಏಟಿಗೆ ಕಂಗಾಲಾದ ಸರಗಳ್ಳ….

snatchingಒಂಟಿಯಾಗಿದ್ದ 77 ವರ್ಷದ ವೃದ್ದ ಮಹಿಳೆಯ ಮನೆಗೆ ನುಗ್ಗಿ ಸರಗಳ್ಳತನಕ್ಕೆ ಯತ್ನಿಸಿದ್ದ ಕಳ್ಳನೊಬ್ಬ ವೃದ್ದೆ ನೀಡಿದ ಏಟಿಗೆ ಕಂಗಾಲಾಗಿ ಪರಾರಿಯಾಗಿದ್ದು, ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ಈಗ ಆತನನ್ನು ಬಂಧಿಸಿದ್ದಾರೆ.

ಈ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕುರುಬಂದಂನಲ್ಲಿ ನಡೆದಿದ್ದು, ಮಂಗಳವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ವೃದ್ದೆ ಅನ್ನಮ್ಮರ ಮನೆ ಮುಂದೆ ನಿಲ್ಲಿಸಿದ್ದ. ಈ ಸಂದರ್ಭದಲ್ಲಿ ತರಕಾರಿ ಕತ್ತರಿಸುತ್ತಿದ್ದ ಅನ್ನಮ್ಮ ಚಾಕು ಹಿಡಿದುಕೊಂಡೇ ಬಾಗಿಲು ತೆರೆದು ಹೊರ ಬಂದಿದ್ದು, ಕ್ಷಣಾರ್ಧದಲ್ಲೇ ಸರಗಳ್ಳ ಅವರ ಕತ್ತಿನಲ್ಲಿದ್ದ 5 ಸವರನ್ ತೂಕದ ಚಿನ್ನದ ಸರವನ್ನು ಎಗರಿಸಿದ್ದ.

ಕೂಡಲೇ ಸಾವರಿಸಿಕೊಂಡ ಅನ್ನಮ್ಮ ಬೈಕ್ ನಲ್ಲಿ ಪರಾರಿಯಾಗಲು ಮುಂದಾದ ಆತನ ಬೆನ್ನಟ್ಟಿದ್ದು, ತಮ್ಮ ಕೈಯ್ಯಲ್ಲಿದ್ದ ಚಾಕುವಿನಿಂದ ಅತನ ಕೈಗೆ ಎರಡು ಬಾರಿ ಇರಿದಿದ್ದಾರೆ. ಇದರಿಂದ ಕಂಗಾಲಾದ ಆತ ಹೇಗೋ ಸರದ ಸಮೇತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಸರಗಳ್ಳತನ ಮಾಡಿದ್ದ 46 ವರ್ಷದ ಜೋಸೈ ಎಂಬಾತನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...