alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುವ ಪ್ರಕರಣ ! ತಾಯಿಯನ್ನೇ…

Mother chain

ಮಕ್ಕಳಿಗೆ ತಾಯಿ ಎಂದರೆ ಪ್ರೀತಿ ಜಾಸ್ತಿ. ಅಮ್ಮನ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ ಎಂದೂ ಹೇಳುತ್ತಾರೆ. ಅಲ್ಲದೇ, ತಾಯಿಯನ್ನು ದೇವರೆಂದು ಪೂಜಿಸುತ್ತಾರೆ. ತಾಯಿಗೆ ಗೌರವ ಕೊಡುವುದು ಹಾಗಿರಲಿ. ಕನಿಷ್ಟ ಸೌಜನ್ಯವನ್ನೂ ತೋರದ ವಿಕೃತ ಮನೋಭಾವದ ವ್ಯಕ್ತಿಯ ಚಿತ್ರಣ ಇಲ್ಲಿದೆ.

ಮಹಾರಾಷ್ಟ್ರದ ಬುಲ್ಹಾಣ ಎಂಬ ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ದೃಶ್ಯ ನೋಡಿದರೆ ಬೆಚ್ಚಿ ಬೀಳುವಂತಿದೆ. 101 ವರ್ಷ ವಯಸ್ಸಿನ ಹಿರಿಯ ಜೀವವನ್ನು ಚೈನ್ ನಲ್ಲಿ ಕಟ್ಟಿಹಾಕಿದ್ದಾನೆ. ತಾಯಿಯನ್ನೇ ಹೀಗೆ ನಾಯಿಯಂತೆ ಕಟ್ಟಿಹಾಕಿ ಕ್ರೂರತನದಿಂದ ವರ್ತಿಸಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 7-8 ವರ್ಷಗಳಿಂದ ತಾಯಿಗೆ ಚೈನ್ ನಲ್ಲಿ ಕಟ್ಟಿಹಾಕಿ ನರಕಯಾತನೆ ಅನುಭವಿಸುವಂತೆ ಮಾಡಿದ್ದ ಈ ದುರುಳನ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅವರ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಮನೆಯಲ್ಲಿ ಚೈನ್ ನಲ್ಲಿ ಕಟ್ಟಿಹಾಕಲಾಗಿದ್ದ 101 ವರ್ಷದ ವೃದ್ಧೆ ನರಕಯಾತನೆ ಅನುಭವಿಸುತ್ತಿರುವುದು ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನಕ್ರಮ ಜರುಗಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...