alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಷಕರನ್ನು ಪೀಡಿಸಿದ್ರೆ ಜೈಲಿಗೋಗ್ತೀರಾ ಹುಷಾರ್…!

 

ವಯಸ್ಸಾದ ತಂದೆ-ತಾಯಿಯನ್ನು ಬಿಟ್ಟುಹೋಗುವ ಅಥವಾ ಅವರನ್ನು ಹಿಂಸಿಸುವ ಮಕ್ಕಳೇ ಎಚ್ಚರ…! ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೋಷಕರನ್ನು ಹಿಂಸಿಸುವ ಮಕ್ಕಳಿಗೆ ಶಿಕ್ಷೆಯನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆಚ್ಚಿಸಲು ಚಿಂತಿಸಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು, ಪೋಷಕರು ಮತ್ತು ಹಿರಿಯ ನಾಗರೀಕರ 2007ರ ಕಾಯ್ದೆಯನ್ನು ಪುನರ್ ವಿಮರ್ಶೆ ಮಾಡುತ್ತಿದ್ದು, ಈ ಕಾಯ್ದೆಯಡಿ ಮಕ್ಕಳೆಂದರೆ ಅವರು ಸ್ವಂತದ್ದಾಗಿರಬಹುದು ಅಥವಾ ದತ್ತು ಮಕ್ಕಳು, ಅಳಿಯಂದಿರು, ಸೊಸೆಯಂದಿರರಬಹುದು. ಇವರು ತಮ್ಮ ಪೋಷಕರಿಗೆ ತೊಂದರೆ ಕೊಟ್ಟಲ್ಲಿ ಈ ಕಾನೂನು ಅನ್ವಯವಾಗಲಿದೆ ಎಂದು ವ್ಯಾಖ್ಯಾನಿಸಿದೆ.

ಹಾಗೆಯೇ ಸಚಿವಾಲಯವು ಸಿದ್ಧಪಡಿಸಿರುವ ಕರಡು ಪ್ರತಿಯಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆಯ ಮೊತ್ತವನ್ನು ಪ್ರಸ್ತಾಪಿಸಿದೆ. ಇದರಲ್ಲಿ ಪೋಷಕರಿಗೆ ಪ್ರತಿ ತಿಂಗಳು ಕನಿಷ್ಟ 10 ಸಾವಿರ ನೀಡುವಂತೆ ತಿಳಿಸಲಾಗಿದೆ. ಮಕ್ಕಳ ಆದಾಯ ಅಧಿಕವಾಗಿದ್ದಲ್ಲಿ, ಪೋಷಕರಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ. ಅಲ್ಲದೆ ಈ ಕಾಯ್ದೆಯಲ್ಲಿ ಪೋಷಕರ ನಿರ್ವಹಣೆಗೆ ಸಂಬಂಧಿಸಿದಂತೆ ಆಹಾರ, ಬಟ್ಟೆ, ವಸತಿ, ಆರೋಗ್ಯ, ರಕ್ಷಣೆ ಮತ್ತು ಪೋಷಕರ ಭದ್ರತೆ ಮತ್ತು ಸ್ವಚ್ಛತೆಯನ್ನು ಒಳಗೊಂಡಿರುತ್ತದೆ. ಒಂದು ವೇಳೆ ಮಕ್ಕಳು ಹಣ ಕೊಡಲು ನಿರಾಕರಿಸಿದಲ್ಲಿ ಪೋಷಕರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...