alex Certify
ಕನ್ನಡ ದುನಿಯಾ       Mobile App
       

Kannada Duniya

ವಸತಿರಹಿತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಆ ಪ್ರಕಾರ ಬಡವರಿಗಾಗಿ ಒಂದು ಲಕ್ಷ 12 ಸಾವಿರ ಹೆಚ್ಚುವರಿ ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಆಂಧ್ರಕ್ಕೆ ಈ ಬಾರಿ ಹೆಚ್ಚಿನ ಪ್ರಯೋಜನ ದೊರೆಯುತ್ತಿದೆ. 37,000 ಮನೆಗಳು ಆಂಧ್ರದಲ್ಲಿ ನಿರ್ಮಾಣವಾಗಲಿದೆ.

ಕೇಂದ್ರ ಗೃಹ ಮತ್ತು ನಗರಾಭಿವೃದ್ಧಿ ಸಚಿವಾಲಯದ ನಡುವೆ ನಡೆದ ಮಹತ್ವದ ಮಾತುಕತೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದಾಗಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ಮನೆಗಳ ಸಂಖ್ಯೆ 55 ಲಕ್ಷಕ್ಕೆ ಏರಿಕೆಯಾಗಲಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅನುಮೋದನೆ ಮತ್ತು ಮೇಲುಸ್ತುವಾರಿ ಸಮಿತಿಯಿಂದ ಮನೆಗಳ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ.

ಕಳೆದ ತಿಂಗಳು ಕೂಡ ಮನೆಗಳ ಅನುಮೋದನೆ ಮತ್ತು ಮೇಲುಸ್ತುವಾರಿ ಸಮಿತಿ 10 ರಾಜ್ಯಗಳಲ್ಲಿ 2 ಲಕ್ಷದ 67 ಸಾವಿರ ಮನೆಗಳ ನಿರ್ಮಾಣಕ್ಕೆ ಅನುಮೋದನೆ ಕೊಟ್ಟಿತ್ತು. ಈ ವರ್ಷ 1 ಲಕ್ಷದ 12 ಸಾವಿರದ 213 ಮನೆಗಳ ಕಾಮಗಾರಿಗೆ ಸಮ್ಮತಿ ಸೂಚಿಸಿದೆ. ಈ ಪ್ರಕ್ರಿಯೆಯಲ್ಲಿ ಆಂಧ್ರಕ್ಕೆ 37,719 ಮನೆಗಳಗೆ ಅನುಮತಿ ಸಿಕ್ಕರೆ ಹರಿಯಾಣ, 19,585, ಮಧ್ಯ ಪ್ರದೇಶ 19,375 ಮಹಾರಾಷ್ಟ್ರ 12,238, ಚತ್ತೀಸ್ ಗಢ್ 10, 632 ಮತ್ತು ಕರ್ನಾಟಕದಲ್ಲಿ 8761 ಮನೆಗಳ ನಿರ್ಮಾಣಕಕ್ಕೆ ಅನುಮತಿ ನೀಡಲಾಗಿದೆ.

ಜಮ್ಮು ಕಾಶ್ಮೀರದಲ್ಲಿ 4, 442, ಅರುಣಾಚಲ ಪ್ರದೇಶದಲ್ಲಿ 188 ಆಮನೆಗಳು ನಿರ್ಮಾಣವಾಗಲಿದೆ. ಈ ಯೋಜನೆಯ ಒಟ್ಟಾರೆ ಅಂದಾಜು ಮೊತ್ತ 1683 ಕೋಟಿ 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಮೂಲಕ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ನಿರ್ಮಾಣವಾಗಲಿರುವ ಮನೆಗಳ ನಿಖರ ಸಂಖ್ಯೆ 54 ಲಕ್ಷದ 59 ಸಾವಿರದ 443 ಆಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...